ಜಿಲ್ಲೆವೈರಲ್ ನ್ಯೂಸ್

ಪೆನ್ಸಿಲ್ ಲೆಡ್‌ನಲ್ಲಿ ಆಕರ್ಷಕವಾಗಿ ಮೂಡಿ‌ ಬಂದ ರಾಮಾಂಜನೇಯ

ಮೈಸೂರು ; ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಈಗಾಗಲೇ ರಾಮಲಲ್ಲಾನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಸಾಂಸ್ಕೃತಿಕ ನಗರಿ‌ ಮೈಸೂರಿನಲ್ಲಿ ತಯಾರಾದ ಮೂರ್ತಿಯೇ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಈಗ ಪೆನ್ಸಿಲ್ ಲೆಡ್‌ನಲ್ಲಿ ಶ್ರೀರಾಮ ಮೂಡಿದ್ದಾನೆ. ಕಲಾವಿದ ನಂಜುಂಡಸ್ವಾಮಿ ಕೈ ಚಳಕದಲ್ಲಿ ಶ್ರೀರಾಮ ಮೂರ್ತಿ ಅರಳಿದೆ. ಪೆನ್ಸಿಲ್ ಲೆಡ್‌ನಲ್ಲಿ ಬಿಲ್ಲು ಬಾಣ ಹಿಡಿದ ಶ್ರೀರಾಮ, ಪಾದದ ಬಳಿ ಆಂಜನೇಯ ಕುಳಿತಿದ್ದಾನೆ. ಆಂಜನೇಯನ ಪಕ್ಕದಲ್ಲಿ ಶ್ರೀರಾಮ ಬರಹವಿದೆ. ಬಹಳ ಸುಂದರವಾಗಿ ಕೆತ್ತನೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button