Thursday, May 1, 2025
30.3 C
Bengaluru
LIVE
ಮನೆಜಿಲ್ಲೆಹಳೆಯ ನಾಣ್ಯ, ನೋಟಿನಲ್ಲಿ ಅರಳಿದ ರಾಮ ಮಂದಿರ ಹವ್ಯಾಸಿ ಕಲಾವಿದನ ಶ್ರೀರಾಮ ಭಕ್ತಿಗೆ ಊರೇ ಫಿದಾ..!

ಹಳೆಯ ನಾಣ್ಯ, ನೋಟಿನಲ್ಲಿ ಅರಳಿದ ರಾಮ ಮಂದಿರ ಹವ್ಯಾಸಿ ಕಲಾವಿದನ ಶ್ರೀರಾಮ ಭಕ್ತಿಗೆ ಊರೇ ಫಿದಾ..!

ಇದೇ ಜನವರಿ 22ರಂದು ಅಯೋಧ್ಯಯಲ್ಲಿ ಪ್ರಭು ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠಾನ ನಡೆಯುತ್ತಿದ್ದು, ಈಗ ಎಲ್ಲಿ ನೋಡಿದರು ಶ್ರೀರಾಮನ ಜಪ ಜೋರಾಗಿದೆ. ಹಲವು ರಾಮನ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಲ್ಲೊಬ್ಬರು ಹವ್ಯಾಸಿ ನಾಣ್ಯ ನೋಟುಗಳ ಸಂಗ್ರಹಾಕರರು ಛಲ ಬೀಡದೆ ರಾಮ ಮಂದಿರ ರಚಿಸಿ ತಮ್ಮ ಭಕ್ತಿ ವ್ಯಕ್ತಪಡಿಸಿದ್ದಾರೆ. ಅದರ ಒಂದು ವಿಶೇಷ ವರದಿ ಇಲ್ಲಿದೆ ನೋಡಿ ಒಂದು ಕಡೆ ನಾಣ್ಯದಲ್ಲಿ ಮೂಡಿ ಬಂದ ಜೈ ಶ್ರೀರಾಮ. ಮತ್ತೊಂದು ಕಡೆ ಕಣ್ಮನ ಸೆಳೆಯುವ ನಾಣ್ಯಗಳ ಹಾಗೂ ನೋಟುಗಳಲ್ಲಿ ರಚನೆಯಾದ ಪ್ರಭು ಶ್ರೀರಾಮನ ಮಂದಿರ. ಎಸ್ ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬಸವೇಶರ ನಗರದ ಹವ್ಯಾಸಿ ನಾಣ್ಯ ಹಾಗೂ ನೋಟುಗಳ ಸಂಗ್ರಹಕಾರರಾದ ಸುನೀಲ ಕಮ್ಮಾರ ಅವರ ನಿವಾಸದಲ್ಲಿ.

ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀ ಬಾಲ ರಾಮ ಪ್ರಾಣ ಪ್ರತಿಷ್ಠಾನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಲಘಟಗಿಯ ಸುನೀಲ ಕುಮಾರವರು 15 ವರ್ಷಗಳ ಹಿಂದಿನ ನಾಣ್ಯಗಳನ್ನು ಬಳಸಿ, ತಮ್ಮ ಮನೆಯಲ್ಲಿಯೇ ಶ್ರೀ ರಾಮನ ಮಂದಿರ ರಚಿಸಿ ಭಕ್ತಿ ಮೇರೆದಿದ್ದಾರೆ‌‌. ಎರಡು ಬಾರಿ ಶ್ರೀ ರಾಮ ಮಂದಿರ ರಚಿಸಲು ಯತ್ನಿಸಿ ಸುನೀಲ್ ವಿಫಲಾಗಿದರು. ಛಲ ಬೀಡದೆ ಮೂರನೇ ಬಾರಿಗೆ ಜೈ ಶ್ರೀ ರಾಮ ಘೋಷಣೆಯೊಂದಿಗೆ ಪ್ರತಿಯೊಂದು ನಾಣ್ಯಗಳನ್ನು ಹಾಗೂ ನೋಟುಗಳನ್ನು ಜೋಡಿಸುತ್ತಾ ಸುಂದರ ರಾಮ ಮಂದಿರ ರಚಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಮಂದಿರ ರಚಿಸಲು ಒಟ್ಟು 7 ಗಂಟೆ 50 ನಿಮಿಷ ಹವ್ಯಾಸಿ ನಾಣ್ಯಗಳ ಸಂಗ್ರಹಕಾರರಾದ ಸುನೀಲ ಸಮಯ ತೆಗೆದುಕೊಂಡಿದ್ದು, ಈಗ ಅವರ ನೀವಾಸದಲ್ಲಿ ಸಾರ್ವಜನಿಕರಿಗೆ ಜನೆವರಿ 22 ರವರೆಗೆ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಇನ್ನೂ ರಾಮ ಮಂದಿರ ರಚಿಸಲು ದೇಶ ಸೇರಿದಂತೆ 15 ಕ್ಕೂ ಹೆಚ್ಚು ಸಾವಿರಕ್ಕೂ ಅಧಿಕ ನಾಣ್ಯ, 83 ಕ್ಕೂ ಅಧಿಕ ನೋಟು ಬಳಕೆ ಮಾಡಲಾಗಿದೆ. ಬೆಳ್ಳಿ ತಾಮ್ರ ಹಿತ್ತಾಳೆ, ಅಲುಮಿನಿಯಮ್, ಸ್ಟೇನ್ ಲೇಸ್ ಸ್ಟಿಲ್, ನಾಣ್ಯಗಳ ಬಳಸಲಾಗಿದೆ‌. ಮಂದಿರ ಗೋಪುರ ರಚನೆಗೆ ಶ್ರೀರಾಮ, ಸೀತಾ ಮಾತೆ ಹಾಗೂ ಲಕ್ಷ್ಮಣ ಜೊತೆಗೆ ಹನುಮಾನ ಭಾವಚಿತ್ರವಿರೋ ನಾಣ್ಯ ಬಳಸಿರುವುದು ವಿಶೇಷವಾಗಿ ಕಾಣುತ್ತಿದ್ದು, ನೋಡುಗರ ಗಮನಸೆಳೆಯಿತ್ತಿದೆ.
ಬೈಟ್- ರವೀಂದ್ರಯ್ಯ ತೊಟಗಟ್ಟಿ, ವಕೀಲರು.

ಅಸಂಖ್ಯಾತ ಭಕ್ತರನ್ನು ಹೊಂದಿರುವ ಪ್ರಭು ಶ್ರೀರಾಮನ ಬಾಲ ರಾಮ ಪ್ರಾಣ ಪ್ರತಿಷ್ಠಾಪನಕ್ಕೆ ಈಗಾಗಲೇ ಅಯೋಧ್ಯಯಲ್ಲಿ ಸಿದ್ಧತೆಗಳು ಬರದಿಂದ ಸಾಗಿದ್ದು, ಅನೇಕ ರಾಮ ಭಕ್ತರು ತಮ್ಮ ಕಲೆ, ಸಂಗೀತ, ಚಿತ್ರ ಕಲೆ ಜೊತೆಗೆ ವಿವಿಧ ರೀತಿಯಲ್ಲಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಧಾರವಾಡದ ಕಲಘಟಗಿಯ ಹವ್ಯಾಸಿ ನಾಣ್ಯ ಸಂಗ್ರಹಕಾರ ಸುನೀಲ ಅವರು ಐದು ಗೋಪುರದ ರಾಮ ಮಂದರಿ ಈಗ ಅವಳಿನಗರದ ಜನಮನಸೆಳೆಯುತ್ತಿದೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments