ಸಿನಿಮಾ

ಬಡವರಿಗೆ ಸೂಪರ್‌ ಸ್ಟಾರ್‌ ಗಿಫ್ಟ್‌..!12 ಎಕರೆಯಲ್ಲಿ ತಲೆ ಎತ್ತಲಿದೆ ಬೃಹತ್‌ ಆಸ್ಪತ್ರೆ

ಚೆನ್ನೈ:ಈಗಾಗಲೇ ಬಡವರ ಅರಾಧ್ಯ ದೈವ ಎನಿಸಿಕೊಂಡಿರುವ ಸೂಪರ್‌ ಸ್ಟಾರ್‌ ರಜನಿಕಾಂತ್‌ ಬಡವರಿಗಾಗಿ ಚೆನೈ ಆಸ್ಪತ್ರೆ ನಿರ್ಮಿಸಲಿ ಮುಂದಾಗಿದ್ದಾರೆ. ರಾಘವೇಂದ್ರ ಫೌಂಡೇಶನ್‌ನಿಂದ ಹಲವಾರು ಬಡವರಿಗಾಗಿ ಅರ್ಥಿಕ ಸಹಾಯ ಮಾಡಿರುವ ರಜನಿ ಈಗ ಬಡರೋಗಿಗಳಿಗೆ ಅನುಕೂಲವಾಗಲು ಬೃಹತ್‌ ಹೈಟೆಕ್‌ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ.

ರಾಜಕೀಯಕ್ಕೆ ಬಂದು ಜನಸೇವೆ ಮಾಡಲು ಸಾಧ್ಯವಿಲ್ಲ , ಜನರಿಗೆ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು.12 ಎಕರೆಯಲ್ಲಿ ಬೃಹತ್‌ ಆಸ್ಪತ್ರೆ ನಿರ್ಮಿಸಲು ಹೊರಟ್ಟಿದ್ದಾರೆ.ಕೆಲ ದಿನಗಳಿಂದ ಚೆನ್ನೈನ ತಿರುಪ್ಪೋರೂರಿನ ರಿಜಿಸ್ಟಾರ್‌ ಕಚೇರಿಗೆ ಬಂದಿದ್ದರು. ರಜನಿಕಾಂತ್‌ ಹೊಸದಾಗಿ ಖರೀದಿಸಿದ ಜಮೀನಿನ ನೋಂದಣಿಯನ್ನೂ ಪೂರ್ಣಗೊಳಿಸಿದರು.

ಚೆನ್ನೈನ ಒಎಂಆರ್‌ ರಸ್ತೆಯಿಂದ ದಲ್ಹಾಂಪುರಕ್ಕೆ ಹೋಗುವ ಮಾರ್ಗದಲ್ಲಿ ರಜನಿ 12 ಎಕರೆ ಜನೀನು ಖರೀದಿಸಿದ್ದಾರೆ. ಡಿಡಿ ದಾಖಲಿಸಲು ರಜನಿ ತಿರುಪೋರೂರು ನೋಂದಣಿಗೆ ಬಂದಿದ್ದರು ಮತು ರಜನಿಕಾಂತ್‌ ಆ ಸ್ಥಳದಲ್ಲಿ ಬೃಹತ್‌ ಆಸ್ಪತ್ರೆ ನಿರ್ಮಿಸಲು ಹೊರಟ್ಟಿದ್ದಾರೆ..ಈ ಆಸ್ಪತ್ರೆ ಬಡವರಿಗೆ ಗುಣಮಟ್ಟದ ಉಚಿತ ವೈದ್ಯಕೀಯ ಸೇವೆ ನೀಡಲು ಯೋಜನೆ ಸಿದ್ದಪಡಿಸಲಾಗುತ್ತಿದೆ. ಅದೇ ಸಮಯದಲ್ಲಿ ಶ್ರೀ ಮಂತರು ಕೂಡ ಇಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

Comments (0)

Your email address will not be published. Required fields are marked *

Back to top button