Wednesday, April 30, 2025
24 C
Bengaluru
LIVE
ಮನೆ#Exclusive NewsTop NewsAkshay Kumar; ಬಾಲಿವುಡ್ ನಟ ಅಕ್ಷಯ್ ಕುಮಾರ್​ಗೆ ಇದೆಂಥಾ ಸ್ವಾಗತ?

Akshay Kumar; ಬಾಲಿವುಡ್ ನಟ ಅಕ್ಷಯ್ ಕುಮಾರ್​ಗೆ ಇದೆಂಥಾ ಸ್ವಾಗತ?

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar)ಗೆ ಲಖನೌದಲ್ಲಿ ಕಹಿ ಅನುಭವ ಆಗಿದೆ.

ತಮ್ಮ ಹೊಸ ಚಿತ್ರ ಬಡೇ ಮೀಯಾ ಚೋಟಾ ಮೀಯಾ (Bade miya Chote miya) ಪ್ರಮೋಷನ್ ಸಲುವಾಗಿ ಟೈಗರ್ ಶ್ರಾಫ್  (Tiger Shraf)ಜೊತೆಗೂಡಿ ಲಖನೌಗೆ ನಟ ಅಕ್ಷಯ್ ಕುಮಾರ್ ಬಂದಿದ್ದರು.

ಆರಂಭದಲ್ಲಿ ಸ್ಟಂಟ್ ಮೂಲಕ ವೇದಿಕೆಗೆ ಲಗ್ಗೆ ಇಟ್ಟರು.

ಕೆಲವೇ ಕ್ಷಣಗಳಲ್ಲಿ ನೂಕುನುಗ್ಗಲು ಆರಂಭವಾಯಿತು.. ಅಕ್ಷಯ್ ಕುಮಾರ್ ಅವರಿದ್ದ ವೇದಿಕೆಯತ್ತ ಚಪ್ಪಲಿಗಳ (Slipper) ಸುರಿಮಳೆಯೇ ಆಯಿತು.. ಜನ ಗುಂಪಿನಿಂದ ಚಪ್ಪಲಿಗಳು ಹಾರಿದವು..

ಇದರಿಂದ ತೀವ್ರ ಮುಜುಗರಗೊಂಡ ನಟ ಅಕ್ಷಯ್ ಕುಮಾರ್ ಪ್ರಮೋಷನ್ ಕಾರ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ ನಿರ್ಗಮಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದರು

ಚಪ್ಪಲಿ ತೂರಾಟದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಕ್ಷಯ್ ಕುಮಾರ್ ಕಣಕ್ಕೆ ಇಳಿಯಲಿದ್ದಾರೆ ಎಂಬುದು ಗುಸುಗುಸು.

ಈ ಹಿಂದೆ ಚಾಂದಿನಿ ಚೌಕ್ ಹೆಸರಿನ ಬಾಲಿವುಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments