Top Newsಸುದ್ದಿ

ಇಂದಿನಿಂದ ಮುಂದಿನ ಮೂರು ದಿನ ಭಾರಿ ಮಳೆಉಯಾಗುವ ಮುನ್ಸೂಚನೆ: ಮಳೆ ಅಲರ್ಟ್​ ನೀಡಿದ ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಲವುಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮತ್ತೆ ಚುರುಕು ಪಡೆದಿದೆ. ಹಾಗೇಯೆ ಇಂದು ಇನ್ನೂ ಕೆಲವೇ ಕ್ಷಣಗಳಲ್ಲಿ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಲ್ಲುವ ಮುನ್ಸೂಚನೆ ಇದೆ. ಇಲ್ಲದೆ ಮಾಹಿತಿ

ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇಂದಿನಿಂದ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 30 ರಿಂದ 40 ಕಿ.ಮೀ ಗಾಳಿಯ ವೇಗದ ಜೊತೆಗೆ ಭಾರೀ ಮಳೆಯಾಗಲಿದೆ.  ದ.ಕ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಕೊಡಗು, ಉ.ಕ, ಭಾಗದಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದೆ. ಹೀಗಾಗಿ ಇಂದಿನಿಂದ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ‌ ಮಾಡಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ನಾಳೆ ರೆಡ್ ಅಲರ್ಟ್,  ಉಡುಪಿ ಜಿಲ್ಲೆಗೆ ಆರೆಂಜ್ ಅಲರ್ಟ್, ಉತ್ತರ ಕನ್ನಡ ಜಿಲ್ಲೆಗೆ ಮೂರು ದಿನ ಆರೆಂಜ್ ಅಲರ್ಟ್,  ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್ ಹಾಗೂ ಹಾಸನ ಜಿಲ್ಲೆಗೆ ಆರೆಂಜ್ ಅಲರ್ಟ್ ಎನ್ನುವ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

ಮಳೆ ಎಲ್ಲೆಲ್ಲಿ ಎಷ್ಟಾಗಿದೆ?
ಮಂಗಳೂರು ವಿಮಾನನಿಲ್ದಾಣ 122.4ಮಿ.ಮೀ,  ಪಣಂಬೂರು 72.9 ಮೀ.ಮೀ, ಕಾರವಾರ 4.2ಮಿ.ಮೀ, ಹೊನ್ನಾವರ 104.5ಮಿ.ಮೀ, ಬೆಂಗಳೂರು ಸಿಟಿ 6.4ಮಿ.ಮೀ, ಬೆಂಗಳೂರು ಹೆಚ್.ಎ.ಎಲ್ 3.9 ಮಿ.ಮೀ, ಮಂಡ್ಯ 1.4 ಮಿ.ಮೀ, ಮೈಸೂರು 3.0ಮಿ.ಮೀ, ಹಾಸನ 7.0ಮಿ.ಮೀ, ಗೋಣಿಕೊಪ್ಪಲ್ 45.0ಮಿ.ಮೀ, ಆಗುಂಬೆ 201 ಮಿ.ಮೀ

Comments (0)

Your email address will not be published. Required fields are marked *

Back to top button