Monday, June 23, 2025
26.6 C
Bengaluru
Google search engine
LIVE
ಮನೆದೇಶ/ವಿದೇಶವಿದೇಶಕ್ಕೆ ಹೋದ್ಮೇಲೆ ರಾಹುಲ್ ಗಾಂಧಿ ಮತ್ತದೇ ಹಳೇ ರಾಗ..!

ವಿದೇಶಕ್ಕೆ ಹೋದ್ಮೇಲೆ ರಾಹುಲ್ ಗಾಂಧಿ ಮತ್ತದೇ ಹಳೇ ರಾಗ..!

ಭಾರತೀಯ ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್​ ಗಾಂಧಿ ಮತ್ತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವೇ ಅಕ್ರಮಗಳನ್ನು ಎಸಗಿದೆ ಎಂದು ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

ಅಮೆರಿಕದ ಬೋಸ್ಟನ್​ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತಾಡಿರುವ ರಾಹುಲ್​ ಗಾಂಧಿ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ವಿವರಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆಗಿರುವ ಮತದಾನದ ಬಗ್ಗೆ ಮತದಾನದ ದಿನ ಸಂಜೆ 5 ಗಂಟೆ 30 ನಿಮಿಷಕ್ಕೆ ನಮಗೆ ಚುನಾವಣಾ ಆಯೋಗ ಅಂಕಿ ಅಂಶ ನೀಡಿತ್ತು. ಆ ಬಳಿಕ ಸಂಜೆ 5 ಗಂಟೆ 30 ನಿಮಿಷದಿಂದ ಸಂಜೆ 7 ಗಂಟೆ 30 ನಿಮಿಷದಲ್ಲಿ 65 ಲಕ್ಷದಷ್ಟು ಮತದಾರರು ಮತದಾನ ಮಾಡಿದ್ದಾರೆ. ಕೇವಲ 2 ಗಂಟೆಯಲ್ಲಿ 65 ಲಕ್ಷ ಮಂದಿ ಮತದಾನ ಮಾಡುವುದು ಅಸಾಧ್ಯವಾದದ್ದು. ಒಬ್ಬ ಮತದಾರರನಿಗೆ ಮತ ಹಾಕಲು ಕನಿಷ್ಠ 3 ನಿಮಿಷ ಬೇಕು. ಈ ಲೆಕ್ಕ ತೆಗೆದುಕೊಂಡರರೆ 65 ಲಕ್ಷ ಮಂದಿ ಮತದಾನ ನಸುಕಿನ ಜಾವ 2 ಗಂಟೆಯವರೆಗೂ ಮತದಾನ ಮಾಡ್ಬೇಕು, ಆದರೆ ಅದು ಆಗಿಲ್ಲ. ಮತದಾನ ಪ್ರಕ್ರಿಯೆ ವೀಡಿಯೋ ದಾಖಲೆ ಕೇಳಿದರೆ ವೀಡಿಯೋ ಕೊಡುವುದಕ್ಕೆ ಚುನಾವಣಾ ಆಯೋಗ ನಿರಾಕರಿಸಿದೆ, ಅಷ್ಟೇ ಅಲ್ಲ, ಕಾನೂನನ್ನೂ ಬದಲಿಸಿದ್ದಾರೆ. ಹೀಗಾಗಿ ನಾವು ಮತದಾನದ ವೀಡಿಯೋ ಕೇಳಲು ಸಾಧ್ಯವಿಲ್ಲ. ಚುನಾವಣಾ ಆಯೋಗ ತನ್ನ ನಿಷ್ಪಕ್ಷಪಾತತೆಯೊಂದಿಗೆ ರಾಜಿ ಮಾಡಿಕೊಂಡಿದೆ. ವ್ಯವಸ್ಥೆಯಲ್ಲಿ ಭಾರೀ ಲೋಪವಿದೆ ಎನ್ನುವುದು ನಮಗೆ ಸ್ಪಷ್ಟವಾಗಿ ಕಾಣುತ್ತಿದೆ. ನಾವು ಇದನ್ನು ಬಹಿರಂಗವಾಗಿಯೇ ಹೇಳುತ್ತಿದ್ದೇವೆ’ ಎಂದು ರಾಹುಲ್​ ಗಾಂಧಿಯವರು ಹೇಳಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ಭಾರತದಲ್ಲಿರುವಾಗ ರಾಹುಲ್​ ಗಾಂಧಿ ಅಮೆರಿಕಕ್ಕೆ ತೆರಳಿ ಭಾರತ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಕಟು ಟೀಕೆ ಮಾಡಿದೆ. ಅಲ್ಲದೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ನಡೆದ ವಯನಾಡು ಲೋಕಸಭಾ ಉಪ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಗೆದ್ದ ಬಗ್ಗೆ ಏನ್​ ಹೇಳ್ತೀರಿ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​, ಎನ್​ಸಿಪಿ ಶರದ್​ಪವಾರ್​ ಬಣ ಮತ್ತು ಉದ್ಧವ್​ ಠಾಕ್ರೆ ಶಿವಸೇನೆ ಬಣ ಪ್ರಚಂಡ ಜಯ ನಿರೀಕ್ಷೆಯಲ್ಲಿತ್ತು. ಆದರೆ ಒಟ್ಟು 288 ಕ್ಷೇತ್ರಗಳ ಪೈಕಿ ಇಂಡಿಯಾ ಮೈತ್ರಿಕೂಟ ಕೇವಲ 46 ಸೀಟುಗಳನ್ನು ಗೆದ್ದು ಹೀನಾಯವಾಗಿ ಸೋತಿತ್ತು. ಆದರೆ ಬಿಜೆಪಿ, ಶಿವಸೇನೆ ಶಿಂಧೆ ಬಣ ಮತ್ತು ಅಜಿತ್​​ ಪವಾರ್​ ಎನ್​​ಸಿಪಿ ಬಣ ಬರೋಬ್ಬರೀ 230 ಸೀಟುಗಳನ್ನು ಗೆದ್ದು ಪ್ರಚಂಡ ಜಯ ಗಳಿಸಿತ್ತು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments