ಸಿನಿಮಾ

ಕಮ್​ ಬ್ಲ್ಯಾಕ್​ ಬಗ್ಗೆ ಅಭಿಮಾನಿಗಳಿಗೆ ರಾಧಿಕಾ ಗುಡ್​ ನ್ಯೂಸ್

ಬೆಂಗಳೂರು : ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್, ಫ್ಯಾಮಿಲಿ ಹೆಚ್ಚು ಕಾಲ ಕಳೆಯುತ್ತಾರೆ. ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ರಾಧಿಕಾ ರೀ ಎಂಟ್ರಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಕಮ್​ ಬ್ಲ್ಯಾಕ್​ ಬಗ್ಗೆ ರಾಧಿಕಾ ಗುಡ್​ ನ್ಯೂಸ್ ಕೊಡುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿರುವ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಟಿ ರಾಧಿಕಾ ಪಂಡಿತ್ ಎಂಟ್ರಿ ಕೊಟ್ಟಿದ್ದು, ಅನೇಕ ಸಿನಿಮಾಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದಾರೆ.

ಅಭಿಮಾನಿಗಳ ಜೊತೆ ಟಚ್​ನಲ್ಲಿ ಇರಲು ಆಗಾಗ ರಾಧಿಕಾ ಪಂಡಿತ್​ ಪ್ರಶ್ನೋತ್ತರ ಸೆಷನ್​ ಕೂಡ ನಡೆಸುತ್ತಾರೆ. ಇನ್ಸ್ಟಾದಲ್ಲಿ ಈ ಬಗ್ಗೆ ಹೊಸ ಪೋಸ್ಟ್ ಮಾಡಿದ್ದಾರೆ. ನಾವು ಸಿಕ್ಕು ತುಂಬಾ ಸಮಯವಾಗಿದೆ. ನೀವು ನಾಳೆ ‘ನನಗೆ ಏನಾದರೂ ಕೇಳಬಹುದು’ ಎಂದು ನಟಿ ರಾಧಿಕಾ ಪಂಡಿತ್ ಬರೆದಿದ್ದಾರೆ. ನಾಳೆ (ಮೇ 28) ರಾಧಿಕಾ ಪಂಡಿತ್ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಲಿದ್ದಾರೆ. ಈ ದಿನಕ್ಕಾಗಿ ಫ್ಯಾನ್ಸ್​ ಕೂಡ ಕಾಯ್ತಿದ್ದಾರೆ.

Comments (0)

Your email address will not be published. Required fields are marked *

Back to top button