Tuesday, April 29, 2025
30.4 C
Bengaluru
LIVE
ಮನೆ#Exclusive Newsಅನುಮಾನಕ್ಕೆ ಕಾರಣವಾದ ಆರ್ ಅಶೋಕ್ ನಡೆ

ಅನುಮಾನಕ್ಕೆ ಕಾರಣವಾದ ಆರ್ ಅಶೋಕ್ ನಡೆ

18 ಮಂದಿ ಬಿಜೆಪಿ ಶಾಸಕರನ್ನು ಅಮಾನತನ್ನು ಹಿಂಪಡೆಯುವಂತೆ ಮನವಿ ಮಾಡಲು, ನಾಳೆ ವಿಧಾನಸಭೆ ಸ್ಪೀಕರ್​ ಯು.ಟಿ. ಖಾದರ್ ಅವ್ರನ್ನ, ವಿರೋಧ ಪಕ್ಷದ ನಾಯಕ ಆರ್.​ ಅಶೋಕ್​ ಮತ್ತೊಮ್ಮೆ ಭೇಟಿಯಾಗಲಿದ್ದಾರೆ.

ಕೆಲ ದಿನಗಳ ಹಿಂದೆ ಶಾಸಕರ ಅಮಾನತು ವಿಚಾರ ಮತ್ತು ಜನಾಕ್ರೋಶ ಯಾತ್ರೆ ಸಂಬಂಧ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಭೆ ಕರೆದಿದ್ರು. ಆದರೆ ಸಭೆಗೆ ಗೈರಾಗಿದ್ದ ಆರ್. ಅಶೋಕ್, ಪಕ್ಷದ ಇತರೆ ನಾಯಕರಿಗೂ ಮುನ್ನವೇ, ಅಂದರೆ ಏಪ್ರಿಲ್​ 1ರಂದು ಸ್ಪೀಕರ್ ಅವರನ್ನು, ಖುದ್ದು ಭೇಟಿಯಾಗಿ ಮನವಿ ಪತ್ರ ಕೊಟ್ಟಿದ್ರು.

ಈಗಲೂ ಕೂಡ ನಾಳೆ ವಿಜಯೇಂದ್ರ ನೇತೃತ್ವದಲ್ಲಿ 3ನೇ ಹಂತದ ಜನಾಕ್ರೋಶ ಯಾತ್ರೆ ಶುರುವಾಗುತ್ತಿದೆ. ದಾವಣಗೆರೆ, ಹಾವೇರಿಯಲ್ಲಿ ನಡೆಯಲಿರುವ ಜನಾಕ್ರೋಶ ಯಾತ್ರೆಯಲ್ಲಿ ಇತರೆ ಬಿಜೆಪಿಗರು ಬ್ಯುಸಿಯಾಗಲಿದ್ದಾರೆ. ಇಂಥಾ ಹೊತ್ತಲ್ಲೇ, ಏಕಾಂಗಿಯಾಗಿ ಸ್ಪೀಕರ್ ಖಾದರ್ ಅವರನ್ನು ಭೇಟಿಯಾಗುತ್ತಿದ್ದಾರೆ.

ಆರ್. ಅಶೋಕ್ ಅವರ ಈ ನಡೆ ಭಾರೀ ಅನುಮಾನಗಳನ್ನು ಹುಟ್ಟು ಹಾಕಿದ್ದು, ಬಿಜೆಪಿ ಪಾಳಯದಲ್ಲಿ ಯಾವುದೂ ಸರಿ ಇಲ್ಲ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ.

ಮಾರ್ಚ್​​ 21ರಂದು ಬಜೆಟ್​ ಅಧಿವೇಶನ ನಡೆಯುತ್ತಿತ್ತು. ಆ ವೇಳೆ ಭಾರೀ ಗಲಾಟೆಗೆ ಕಾರಣವಾಗಿದ್ದ 18 ಮಂದಿ ಶಾಸಕರನ್ನು 6 ತಿಂಗಳ ಮಟ್ಟಿಗೆ ಸ್ಪೀಕರ್ ಅಮಾನತು ಮಾಡಿದ್ರು. ಇದರಿಂದಾಗಿ ಮಳೆಗಾಲದ ಅಧಿವೇಶನದಲ್ಲಿ ಅಮಾನತಾದ ಶಾಸಕರು ಭಾಗವಹಿಸಲು ಸಾಧ್ಯವಿಲ್ಲ. ಹೀಗಾಗಿ ಅಮಾನತು ಆದೇಶ ವಾಪಸ್ ಪಡೆಯುವಂತೆ ಸ್ಪೀಕರ್ ಮೇಲೆ ಅಶೋಕ್ ಒತ್ತಡ ಹೇರುತ್ತಿದ್ದಾರೆ. ಮನವಿಗೆ ಸ್ಪೀಕರ್ ಖಾದರ್​ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ, ಅಶೋಕ್ ge ಹಿನ್ನಡೆ ಆದಂತೆ ಆಗಲಿದೆ. ವಿಪಕ್ಷ ನಾಯಕನಾಗಿ ಶಾಸಕರ ಹಿತರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದರೆ ಅನ್ನೋ ಹಣೆಪಟ್ಟಿ ಹೊತ್ತುಕೊಳ್ಳಲಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments