Thursday, January 29, 2026
18 C
Bengaluru
Google search engine
LIVE
ಮನೆSportsಒಲಿಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುವಿಗೆ ಮದುವೆ ಫಿಕ್ಸ್!

ಒಲಿಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುವಿಗೆ ಮದುವೆ ಫಿಕ್ಸ್!

ರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು  ಇದೇ 22 ರಂದು ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಭಾನುವಾರ  ರಂದು ಲಕ್ನೋದಲ್ಲಿ  ನಡೆದ 2024ರ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.ವೆಂಕಟ ದತ್ತ ಸಾಯಿ ಅವರು ಪಾಸಿಡೆಕ್ಸ್ ಟೆಕ್ನಾಲಜೀಸ್ ನಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಪಿವಿ ಸಿಂಧು ಅವರು ಲಖನೌನಲ್ಲಿ ಸಯ್ಯದ್ ಮೋದಿ ಇಂಟರ್ ನ್ಯಾಶನಲ್ ಟೂರ್ನಿ ಯಲ್ಲಿ ಗೆದ್ದ ಬೆನ್ನಲ್ಲೇ ಈ ಸಂಗತಿಯನ್ನು ಅವರ ಕುಟುಂಬ ಬಹಿರಂಗಪಡಿಸಿದೆ.

ಸಿಂಧು ತಂದೆ ಪಿವಿ ರಮಣ ಮಾಹಿತಿ ನೀಡಿದ್ದು, ಡಿ.20 ರಿಂದ ಮದುವೆ ಶಾಸ್ತ್ರಗಳು ಶುರುವಾಗಲಿದೆ. ಡಿ.22 ರಂದು ಉದಯಪುರದಲ್ಲಿ ಮದುವೆ ನಡೆಯಲಿದೆ. ಇನ್ನೂ ಡಿ.24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಿಂಧು ಅವರು  ಒಂದು ಚಿನ್ನದ ಪದಕ ಸೇರಿದಂತೆ ಒಟ್ಟು ಐದು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments