Friday, August 22, 2025
24.8 C
Bengaluru
Google search engine
LIVE
ಮನೆ#Exclusive Newsದಾಖಲೆಯತ್ತ ‘ಪುಷ್ಪ‘ನ ನಡೆ.....!

ದಾಖಲೆಯತ್ತ ‘ಪುಷ್ಪ‘ನ ನಡೆ…..!

ಚಿತ್ರರಂಗದ ರೂಪುರೇಷೆ ಬದಲಾಗುತ್ತಿದೆ. ಈಗ ಇಂಡಸ್ಟ್ರಿಯಲ್ಲಿರುವ ಎಲ್ಲಾ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬಿಡುಗಡೆಯಾಗುತ್ತಿವೆ. ಮೊದಲು 100 ಕೋಟಿ ರೂಪಾಯಿ ಗಳಿಸಿದರೆ ಹೆಚ್ಚು ಎಂಬ ಕಾಲ ಇತ್ತು. ಆದರೆ, ಈಗಿನ ಸಿನಿಮಾಗಳು ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಹೊಸ ದಾಖಲೆ ಸೃಷ್ಟಿಸುತ್ತಿವೆ. ಆದರೆ ಈಗ ಪುಷ್ಪ 2 ಚಿತ್ರ ಎಲ್ಲಾ ದಾಖಲೆಗಳನ್ನು ಮುರಿಯಲಿದೆ.

‘ಬಾಹುಬಲಿ 2’ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಿತ್ತು. ‘ಬಾಹುಬಲಿ 2’ ಚಿತ್ರ ವಿಶ್ವದಾದ್ಯಂತ ರೂ. 1742.3 ಕೋಟಿ ಗಳಿಸಿದೆ. ಈ ಮೂಲಕ ದಾಖಲೆ ಬರೆದಿತ್ತು. ಇದನ್ನು ‘ಪುಷ್ಪ 2’ ಮುರಿಯಲು ರೆಡಿ ಆಗಿದೆ.

‘ಪುಷ್ಪ 2’ ಈಗ ಮೂರನೇ ಸ್ಥಾನದಲ್ಲಿದೆ. ಡಿಸೆಂಬರ್ 5 ರಂದು ಬಿಡುಗಡೆಯಾದ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಭರ್ಜರಿ ಕಮಾಯಿ ಮಾಡುತ್ತಿದೆ. ಚಿತ್ರಮಂದಿರಗಳಲ್ಲಿ ಇಂದಿಗೂ ಮಿಂಚುತ್ತಿದೆ. ಈ ಚಿತ್ರ ಈಗಾಗಲೇ ರೂ. 1719.5 ಕೋಟಿ ಸಂಗ್ರಹಿಸಿದೆ. ಶೀಘ್ರದಲ್ಲೇ ‘ಪುಷ್ಪ 2’ ಚಿತ್ರವು ‘ಬಾಹುಬಲಿ 2’ ದಾಖಲೆಯನ್ನು ಮುರಿಯಲಿದೆ.

ನಾಲ್ಕನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾ ಇದೆ. ರಾಮ್ ಚರಣ್ ಮತ್ತು ಎನ್ಟಿಆರ್ ಅಭಿನಯದ RRR ಚಿತ್ರ ವಿಶ್ವಾದ್ಯಂತ ರೂ. 1250.9 ಕೋಟಿ ಸಂಗ್ರಹಿಸಲಾಗಿದೆ. ಈ ಸಿನಿಮಾದ ನಂತರ ಯಶ್ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರ ರೂ. 1176.5 ಕೋಟಿ ಸಂಗ್ರಹಿಸಿದೆ. ಈಗ ಎಲ್ಲ ದಾಖಲೆಗಳನ್ನು ‘ಪುಷ್ಪ 2’ ಉಡೀಸ್ ಮಾಡುತ್ತಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments