Tuesday, June 24, 2025
27.5 C
Bengaluru
Google search engine
LIVE
ಮನೆ#Exclusive NewsTop News‘ಪುಷ್ಪ 2’ 3ಡಿ ವರ್ಷನ್ ಈ ವಾರ ರಿಲೀಸ್ ಆಗಲ್ಲ; ಕಾರಣ ಇಲ್ಲಿದೆ

‘ಪುಷ್ಪ 2’ 3ಡಿ ವರ್ಷನ್ ಈ ವಾರ ರಿಲೀಸ್ ಆಗಲ್ಲ; ಕಾರಣ ಇಲ್ಲಿದೆ

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಲಕ್ಷಾಂತರ ಟಿಕೆಟ್​ಗಳು ಮಾರಾಟ ಆಗಿದ್ದು, ರಿಲೀಸ್​​ಗೂ ಮುನ್ನವೇ ಬುಕಿಂಗ್ ಟಿಕೆಟ್​ಗಳಲ್ಲಿ 100 ಕೋಟಿ ಗಳಿಕೆ ಮಾಡಿದೆ. ಇದು ಸಿನಿಮಾ ಹೈಪ್​ಗೆ ಸೃಷ್ಟಿ ಆಗಿರೋ ಉದಾಹರಣೆ. ಇನ್ನು ಈ ಚಿತ್ರ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗುವ ಸಾಧ್ಯತೆ ಇದೆ. ಈಗ ‘ಪುಷ್ಪ 2’ ಚಿತ್ರ 2ಡಿ ಜೊತೆ 3ಡಿಯಲ್ಲೂ ರಿಲೀಸ್ ಆಗಬೇಕಿತ್ತು. ಆದರೆ ಆರಂಭದಲ್ಲಿ ಇದಕ್ಕೆ ಬುಕಿಂಗ್ ಕೂಡ ಓಪನ್ ಆಗಿತ್ತು. ತಾಂತ್ರಿಕ ಸಮಸ್ಯೆಗಳಿಂದ ಈಗ ಬುಕಿಂಗ್ ಸ್ಥಗಿತ ಮಾಡಲಾಗಿದೆ.

ಪುಷ್ಪ 2’ ಚಿತ್ರದ 3ಡಿ ವರ್ಷನ್ ರಿಲೀಸ್ ಮಾಡೋದಾಗಿ ಪ್ರಚಾರದಲ್ಲಿ ತಂಡ ಹೇಳಿಕೊಂಡಿತ್ತು. ಆದರೆ, ಈಗ ತಂಡ ತನ್ನ ನಿಲುವು ಬದಲಿಸಿದೆ. ಕಾರಣಾಂತರಗಳಿಂದ ಈ ವಾರ ‘ಪುಷ್ಪ 2’ ಚಿತ್ರದ 3ಡಿ ವರ್ಷನ್ ರಿಲೀಸ್ ಆಗುತ್ತಿಲ್ಲ. ಈ ಬಗ್ಗೆ ಬಾಕ್ಸ್ ಆಫೀಸ್ ಪಂಡಿತ ತರಣ್ ಆದರ್ಶ್ ಅವರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಈಗಾಗಲೇ ತೆಲುಗು ಹಾಗೂ ಹಿಂದಿ 3ಡಿ ವರ್ಷನ್ ಬುಕಿಂಗ್ ಆಯ್ಕೆಯನ್ನು ‘ಬುಕ್ ಮೈ ಶೋ’ನಿಂದ ತೆಗೆದು ಹಾಕಲಾಗಿದೆ. ಮುಂದಿನ ವಾರಗಳಲ್ಲಿ 3ಡಿ ವರ್ಷನ್ ರಿಲೀಸ್ ಆಗುವ ಸಾಧ್ಯತೆ ಇದೆ. ‘ಪುಷ್ಪ’ ಚಿತ್ರ ಕೇವಲ 2ಡಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ‘ಪುಷ್ಪ 2’ ಚಿತ್ರವನ್ನು ತಂಡದವರು ಹೊಸ ರೀತಿಯಲ್ಲಿ ಬಿಡುಗಡೆ ಮಾಡುವ ಸಾಹಸಕ್ಕೆ ಮುಂದಾದರು. ಆದರೆ, ಈಗ ಇದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ಅವರ ನಿರ್ದೇಶನ ಇದೆ. ಮೈತ್ರಿ ಮೂವೀ ಮೇಕರ್ಸ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಹವಾ ಸೃಷ್ಟಿ ಮಾಡಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments