ಕೊಪ್ಪಳ :

ಕೊಪ್ಪಳ ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಬಿಜೆಪಿ ಪಾಳಯದಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಪ್ರಭಾಕರ್ ಚಿಣಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನನ್ನ ಸೇವೆ ನಿರಂತರ ಎಂಬಂತೆ ಇದೀಗ ಕ್ಷೇತ್ರದಲ್ಲಿ ಓಡಾಟವನ್ನ ಹೆಚ್ಚಿಸಿದ್ದಾರೆ. ತನ್ನ ಮತದಾರರ ಮನದಾಳವನ್ನು ಅರ್ಥ ಮಾಡಿಕೊಂಡಿರುವ ನಿವೃತ್ತ ಜಲ ಸಂಪನ್ಮೂಲ ಇಲಾಖೆ ಅಧಿಕಾರಿ ಚಿಣಿ ಕ್ಷೇತ್ರ ವ್ಯಾಪಿ ಸಂಚಾರ ಮಾಡುತ್ತಿದ್ದಾರೆ. ಅಭಿಮಾನಿಗಳ ದೊಡ್ಡಪಡೆಯನ್ನ ಕಟ್ಟಿಕೊಂಡು ಸೇವೆ ಮಾಡುತ್ತಿದ್ದಾರೆ.

ಇನ್ನೂ ಲೋಕಸಭಾ ಕ್ಷೇತ್ರದ ಪೂರ್ತಿ ಈಗಾಗಲೇ ಓಡಾಟ ಶುರುಮಾಡಿರುವ ಚಿಣಿ, ಕೇವಲ ಚುನಾವಣೆ ಬಂತು ಅಂತ ಮತದಾರರ ಮನೆ ಬಾಗಿಲಿಗೆ ಹೋಗುತ್ತಿಲ್ಲ. ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ದಿನದಿಂದಲೂ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಕಷ್ಟದಲ್ಲಿರುವವರ ಕಣ್ಣೀರು ಒರೆಸಿಕೊಂಡು ಬಂದಿದ್ದಾರೆ. ಮತದಾರನ ಸುಖ ದುಃಖದಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಮೊನ್ನೆ ಫೆಬ್ರವರಿ 19 ನೇ ತಾರೀಕು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಶ್ಚರ್ಯ ಎಂಬಂತೆ ಶರಣಪ್ಪ ಚಿಣಿ ಮತ್ತು ನಿವೇದಿತಾ ದಂಪತಿಗಳನ್ನು ಆಶೀರ್ವದಿಸೋಕೆ ಹೊಸದುರ್ಗದ ಭಗೀರಥ ಪೀಠದ ಶ್ರೀಗಳಾದ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಆಗಮಿಸಿದ್ದರು. ಈ ವೇಳೆ ಶ್ರೀಗಳು ಪ್ರಭಾಕರ್ ಚಿಣಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿ, ಭಗವಂತ ಕಾಯ್ತಾನೆ, ಒಳ್ಳೆಯವರಿಗೆ ಒಳ್ಳೆಯದೇ ಆಗಲಿದೆ, ನಿಮಗೆ ಒಳ್ಳೆಯದು ಆಗಲಿದೆ ಅಂತ ಆಶೀರ್ವಾದ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಭಾಕರ್ ಚಿಣಿ ಅವರೊಟ್ಟಿಗೆ ತಾಲೂಕಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಜೊತೆಯಾಗಿದ್ದರು.

By admin

Leave a Reply

Your email address will not be published. Required fields are marked *

Verified by MonsterInsights