ಮಹಾರಾಷ್ಟ್ರದ ಮಹಿಳಾ ಮಂತ್ರಿ, ಬಿಜೆಪಿ ನಾಯಕಿ ಪಂಕಜಾ ಮುಂಡೆ ಪೋಕಿರಿಗಳಿಂದ ಕಿರುಕುಳ ಅನುಭವಿಸಿದ್ದಾರೆ. ಬಿಜೆಪಿ ನಾಯಕಿಗೆ ಟಾರ್ಚರ್ ಕೊಟ್ಟ ವ್ಯಕ್ತಿಯನ್ನು ಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಪುಂಡನೊಬ್ಬ ಮಹಾರಾಷ್ಟ್ರದ ಸಚಿವೆ ಪಂಕಜಾ ಮುಂಡೆ ಅವರಿಗೆ ಪದೇ ಪದೇ ಫೋನ್ ಮಾಡುತ್ತಾ ಅಶ್ಲೀಲವಾಗಿ ಮಾತನಾಡುತ್ತಿದ್ದ.. ಅಸಭ್ಯ ಸಂದೇಶಗಳನ್ನು ಕಳಿಸ್ತಿದ್ದ. ಈ ಬಗ್ಗೆ ಮಹಾರಾಷ್ಟ್ರದ ಬಿಜೆಪಿ ಕಚೇರಿಗೆ ಸೇರಿದ ಸೋಷಿಯಲ್ ಮೀಡಿಯಾ ಸಮನ್ವಯಕಾರ ನಿಖಿಲ್ ಭಮ್ರೆ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಫೋನಲ್ಲಿ ಟಾರ್ಚರ್ ಕೊಡ್ತಿದ್ದ ಪುಣೆಯ ವ್ಯಕ್ತಿ ಅಮೋಲ್ ಕಾಳೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
25 ವರ್ಷದ ಅಮೋಲ್ ಕಾಳೆ ಏಕಾಗಿ ಪಂಕಜಾ ಮುಂಡೆ ಅವರನ್ನು ಟಾರ್ಗೆಟ್ ಮಾಡಿದ್ದ.. ಇದು ಈತನೊಬ್ಬನ ಕೃತ್ಯನಾ? ಇದರ ಹಿಂದೆ ಬೇರೆ ಯಾರಾದರೂ ಇದ್ದಾರಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.