ಕೊಪ್ಪಳ: ಪಿಎಸ್‌ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಪರಶುರಾಮ ಮೃತದೇಹದ ಬಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಪರಶುರಾಮ ಆತ್ಮಹತ್ಯೆಗೆ ಕಾರಣರಾದ ಯಾದಗಿರಿ ಶಾಸಕ ಚನ್ನಾರೆಡ್ಡಿ ವಿರುದ್ಧ ಘೋಷಣೆ ಕೂಗಿ ಬಂಧಿಸುವಂತೆ ಆಗ್ರಹಿಸಿದರು. ಈ ಪ್ರಕರಣವನ್ನು ಸಿಐಡಿಗೆ ವಹಿಸಲು ನೆರೆದಿದ್ದ ಜನರ ಆಗ್ರಹಿಸಿದ್ದು, ಅಮರ್ ಹೇ, ಅಮರ್ ಹೇ ಪರಶುರಾಮ ಅಮರ್ ಹೇ ಎಂದು ಘೋಷಣೆ ಕೂಗಿದ.