ಜಿಲ್ಲೆ
ಕೊಪ್ಪಳದಲ್ಲಿ ಮಹಾರಾಷ್ಟ್ರದ ಲಾರಿ ತಡೆದು ಪ್ರೊಟೆಸ್ಟ್

ಕೊಪ್ಪಳ: ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಇಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಇನ್ನು ಕೊಪ್ಪಳದಲ್ಲಿ ಬಂದ್ ಹಿನ್ನಲೆ ಹಿಟ್ನಾಳ್ ಟೋಲ್ ಗೇಟ್ ಬಳಿ ಮಹಾರಾಷ್ಟ್ರದ ಲಾರಿಗಳನ್ನು ತಡೆದು ಕರವೇ ಯುವಶಕ್ತಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಂಇಎಸ್, ಶಿವಸೇನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ಮುಂದೆ ಮಹಾರಾಷ್ಟ್ರ ಪುಂಡಾಟಿಕೆ ನಿಲ್ಲಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದೇ ವೇಳೆ ಮಹಾರಾಷ್ಟ್ರದ ಲಾರಿ ಚಾಲಕನಿಗೆ ಗುಲಾಬಿ ಹೂ ನೀಡಿ, ಕರ್ನಾಟಕದವರು ಶಾಂತಿ ಪ್ರಿಯರು ಎಂದು ಕನ್ನಡ ಪರ ಸಂಘಟನೆಗಳು ಸಂದೇಶ ಸಾರಿದರು.




