ವಯನಾಡು : ವಯನಾಡು ಉಪಚುನಾವಣೆಯಲ್ಲಿ ಕಣಕ್ಕೆ ಇಳಿದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಸೋಮವಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಪ್ರಿಯಾಂಕಾ ಕೇಂದ್ರ ದಲ್ಲಿರುವ ಬಿಜೆಪಿ ಸಮುದಾಯಗಳ ನಡುವೆ ಭಯ, ಕೋಪ, ಅಗೌರವವನ್ನು ಬಿತ್ತುತ್ತಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ನೀವು ನೋಡಿದ್ದೀರಿ. ಮಣಿಪುರದ ಹಿಂಸಾಚಾರ ನೋಡಿದ್ದೀರಿ. ನೀವು ಯೋಜಿತ ರೀತಿಯಲ್ಲಿ ಮತ್ತೇ ಮತ್ತೇ ಕೋಪ, ದ್ವೇಷವನ್ನು ನೋಡುತ್ತಿದ್ದೀರಿ. ಇಂದು ನಾವು ದೊಡ್ಡ ಯುದ್ಧವನ್ನು ನಡೆಸುತ್ತಿದ್ದೇವೆ. ನಾವೆಲ್ಲರೂ ದೇಶವನ್ನು ಕಟ್ಟಿರುವ ಮೌಲ್ಯಗಳಿಗಾಗಿ ಹೋರಾಡುತ್ತಿದ್ದೇವೆ. ಸಂವಿಧಾನದ ಮೌಲ್ಯಗಳಿಗೆ, ಪ್ರಜಾಪ್ರಭುತ್ವಕ್ಕಾಗಿ, ಸಮಾನತೆಗಾಗಿ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನೀವೆಲ್ಲರೂ ಯೋಧರಾಗಿದ್ದೀರಿ’ ಎಂದರು.
ವಯನಾಡಲ್ಲಿ ಪ್ರಚಾರ ಆರಂಭಿಸಿದ ಪ್ರಿಯಾಂಕಾ ಗಾಂಧಿ
RELATED ARTICLES