Wednesday, September 10, 2025
23.7 C
Bengaluru
Google search engine
LIVE
ಮನೆ#Exclusive NewsTop Newsಸೂರಜ್ ರೇವಣ್ಣ ಬಂಧನ ಕೇಸ್‌ – ಇವೆಲ್ಲ ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣ: ಪ್ರಿಯಾಂಕ್‌ ಖರ್ಗೆ

ಸೂರಜ್ ರೇವಣ್ಣ ಬಂಧನ ಕೇಸ್‌ – ಇವೆಲ್ಲ ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣ: ಪ್ರಿಯಾಂಕ್‌ ಖರ್ಗೆ

ಕಲಬುರಗಿ: ಸೂರಜ್‌ ರೇವಣ್ಣ ಪ್ರಕರಣ  ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ  ತೀವ್ರ ಬೇಸರ ಹೊರಹಾಕಿದ್ದಾರೆ.

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ ವಿಚಾರಕ್ಕೆ ಕುರಿತು ಕಲಬುರಗಿಯಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಈ ಪ್ರಕರಣದ ಬಗ್ಗೆ ಏನು ಮಾತನಾಡಬೇಕು ಅಂತ ಗೊತ್ತಾಗ್ತಿಲ್ಲ. ಇವೆಲ್ಲಾ ವಿಚಿತ್ರ, ವಿಕೃತ, ಅಸಹ್ಯ ಪಡುವ ಪ್ರಕರಣಗಳು. ಪ್ರಜ್ವಲ್, ಸೂರಜ್, ಯಡಿಯೂರಪ್ಪ ಪ್ರಕರಣಗಳಲ್ಲಿ ಯಾವುದೇ ಆಗಿರಬಹುದು. ಯಾರು ಮಾಡಿದ್ದಾರೆ, ಅವರಿಗೂ ಏನು ಅನ್ನಿಸುತ್ತಿಲ್ಲವಲ್ಲ. ಅವರು ಆತ್ಮಾವಲೋಕನ ಮಾಡಿಕೊಳ್ಳತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ನಾವು ಜವಾಬ್ದಾರಿ ಕುಟುಂಬದಿಂದ ಬಂದಿರೋದು, ಈ ಪ್ರಕರಣದ ಕುರಿತು ದೊಡ್ಡ ಮನೆ, ದೊಡ್ಡ ಕುಟುಂಬದವರಿಗೆ ನೀವು ಕೇಳಬೇಕು. ಈ ಕಳಂಕ ಅಳಿಸೋವರೆಗೂ ಅಧಿಕಾರ ಬಿಟ್ಟಿರುತ್ತೇವೆ ಅಂತನಾದರೂ ಹೇಳ್ತಾರಾ? ಕುಮಾರಸ್ವಾಮಿ, ದೇವೆಗೌಡ, ರೇವಣ್ಣ ಅವರ ಬಗ್ಗೆ ನಾನು ಮಾತನಾಡೋದಿಲ್ಲ. ಅವರ ಆತ್ಮಸಾಕ್ಷಿಗೆ ತಿಳಿದಂತೆ ಅವರು ಕೆಲಸ ಮಾಡಬೇಕು. ಆದ್ರೆ ಬಿಜೆಪಿಯವರ ಸ್ಮಶಾನ ಮೌನ ಯಾಕೆ ಅಂತಾ ಗೋತ್ತಾಗ್ತಿಲ್ಲ. ಉಳಿದ ಸಮಯದಲ್ಲಿ ನ್ಯಾಯದ ಬಗ್ಗೆ ಮಾತಾಡುವ ಬಿಜೆಪಿಯವರು ಇವಾಗ ಮೌನ ಯಾಕೆ? ಸಂವಿಧಾನ ಉಲ್ಲಂಘನೆ , ಕಾನೂನು ಉಲ್ಲಂಘನೆ ಆದಾಗಾ ಮಾತಾಡೋದಿಲ್ಲ ಎಂದು ಕುಟುಕಿದ್ದಾರೆ.
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನದ ಸೆನ್‌ ಠಾಣೆ ಪೊಲೀಸರು ಸೂರಜ್‌ ರೇವಣ್ಣ ಅವರನ್ನ ಬಂಧಿಸಿದ್ದಾರೆ. ಸದ್ಯ ಅವರನ್ನ ಬೆಂಗಳೂರಿಗೆ ಕರೆತರಲಾಗಿದೆ. ಮೆಡಿಕಲ್‌ ಟೆಸ್ಟ್‌ ಮುಗಿದ ನಂತರ ಸಂಜೆ 4 ಗಂಟೆ ವೇಳೆಗೆ ಜಡ್ಜ್‌ ಮುಂದೆ ಹಾಜರುಪಡಿಸಲಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com
Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments