Sunday, December 7, 2025
23.6 C
Bengaluru
Google search engine
LIVE
ಮನೆಜಿಲ್ಲೆಜೈಲಿನಲ್ಲಿ ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್​​ ಬಂದ್​​, 3ದಿನಗಳಿಂದ ಕೈದಿಗಳ ಪ್ರತಿಭಟನೆ

ಜೈಲಿನಲ್ಲಿ ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್​​ ಬಂದ್​​, 3ದಿನಗಳಿಂದ ಕೈದಿಗಳ ಪ್ರತಿಭಟನೆ

ಬೆಂಗಳೂರು: ಇತ್ತಿಚೇಗೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಅಕ್ರಮ ಚಟುವಟಿಕೆಗಳ ವಿಡಿಯೋ ಹೊರಬಂದ ಬೆನ್ನಲ್ಲೇ ಜೈಲು ಒಳಗೆ ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್​​​​​ ಬಂದ್​​ ಮಾಡಿದ್ದಕ್ಕೆ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.. ಊಟ, ತಿಂಡಿ ಬಿಟ್ಟು ಮೂರು ದಿನಗಳಿಂದ ಬಂಧಿತ ಆರೋಪಿಗಳು ನಿಷೇಧಿತ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಲು ಒತ್ತಾಯಿಸಿದ್ದಾರೆ..

ಜೈಲು ಕೈಪಿಡಿ ಈ ವಸ್ತುಗಳ ಮಾರಾಟ ಕಾನೂನುಬಾಹಿರವಾಗಿರುವ ಕಾರಣ ಜೈಲು ಸಿಬ್ಬಂದಿಯೇ ಅವುಗಳನ್ನು ಜೈಲು ಒಳಗೆ ತರಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.. ಇತ್ತೀಚಿಗೆ ನಡೆಸಿದ ವಿಶೇಷ ಶೋಧ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಮೋಬೈಲ್​ಗಳನ್ನು ಪಡೆದಿದ್ದು, ಆಡಳಿತ ಮತ್ತಷ್ಟು ಜಾಗೃತಗೊಂಡಿದೆ..

ಈ ಹಿನ್ನೆಲೆ ಬೀಡಿ–ಸಿಗರೇಟ್ ಮಾರಾಟ ನಿಲ್ಲಿಸಿದ್ದಕ್ಕೆ ಅಸಮಾಧಾನಗೊಂಡ ಕೈದಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ದಿನಗಳಿಂದ ಕೈದಿಗಳಿಂದ ಧರಣಿ ಮತ್ತು ಉಪವಾಸ ಪ್ರತಿಭಟನೆ ನಡೆಸುತ್ತಿದ್ದು, ಮಾರಾಟಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಜೈಲು ನಿಯಮಾವಳಿಯ ಪ್ರಕಾರವೇ ಕ್ರಮ ಜರುಗಿಸಲಾಗುವುದೆಂದು ಸ್ಪಷ್ಟಪಡಿಸಿದ್ದಾರೆ.

ಜೈಲಿನಲ್ಲಿನ ಅಕ್ರಮ ಚಟುವಟಿಕೆಗಳ ವಿಡಿಯೋ ಹೊರಬಂದ ನಂತರ, ಸರ್ಕಾರ ಜೈಲು ಆಡಳಿತದಲ್ಲಿ ಬದಲಾವಣೆ ಮಾಡಿ ಅಂಶುಕುಮಾರ್ ಅವರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಿತ್ತು. ಅವರ ನಿರ್ದೇಶನದಂತೆ ಜೈಲಿನಲ್ಲಿ ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್ ಹಾಗೂ ಇತರ ನಿಷೇಧಿತ ವಸ್ತುಗಳ ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿತ್ತು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments