Wednesday, August 20, 2025
20.6 C
Bengaluru
Google search engine
LIVE
ಮನೆ#Exclusive Newsಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯ  ಹೆಸರು ; ಯದುವೀರ್ ವಿರೋಧ

ಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯ  ಹೆಸರು ; ಯದುವೀರ್ ವಿರೋಧ

ಮೈಸೂರು : ಮುಡಾ ನಿವೇಶನ ಪ್ರಕರಣ ಮರೆಯಾಗುತ್ತಿದ್ದಂತೆ ಸಿದ್ದರಾಮಯ್ಯ  ಆರೋಗ್ಯ ಮಾರ್ಗ  ರಸ್ತೆ ನಾಮಕರಣ ವಿವಾದ ಮುನ್ನಲೆಗೆ ಬಂದಿದೆ. ಪ್ರಿನ್ಸಸ್ ರಸ್ತೆಗೆ ದಾಖಲೆ ಇಲ್ಲವೆಂದು ಕಾಂಗ್ರೆಸ್ ಮುಖಂಡರು ವಾದಿಸುತ್ತಿದ್ದಾರೆ. ಆದರೆ ಇದೀಗ ಪ್ರಿನ್ಸೆಸ್ ರಸ್ತೆ ಎಂಬುದಕ್ಕೆ ದಾಖಲೆಗಳಿವೆ ಎಂದು ಮ್ಯಾಪ್, ಪತ್ರ ವ್ಯವಹಾರದ ದಾಖಲೆಗಳನ್ನು ಹಂಚಿಕೊಳ್ಳುವ ಮೂಲಕ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದನ್ನು ಬಿಜೆಪಿ ಸಂಸದ ಯದುವೀರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ  ಸಂಸದ ಯದುವೀರ್, ಕೆಆರ್‌ಎಸ್ ರಸ್ತೆಗೆ ಅಧಿಕೃತ ಹೆಸರು ನೀಡಿರುವ ಉಲ್ಲೇಖಗಳಿಲ್ಲ ಎಂದು ಹೇಳುತ್ತಿರುವ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರೇ, ಈ ದಾಖಲೆಗಳನ್ನೊಮ್ಮೆ ನೋಡಿ ಎಂದಿದ್ದಾರೆ.

  1. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್​ರವರ ದೂರದ ಸಂಬಂಧಿಯೊಬ್ಬರು ಪ್ರಿನ್ಸೆಸ್ ರಸ್ತೆಯಲ್ಲಿ ವಾಸವಿದ್ದರು, ಅವರು ಬರೆದಿರುವಂತಹ at post ಪತ್ರಗಳ ವಿಳಾಸದಲ್ಲಿ ‘ಪ್ರಿನ್ಸೆಸ್ ರಸ್ತೆ’ಯ ಹೆಸರು ಬಳಸಲಾಗಿದೆ.
  2. ಕೇಂದ್ರ ಸರ್ಕಾರದ ಭಾರತದ ಮ್ಯಾಪಿಂಗ್ ಮತ್ತು ಸಮೀಕ್ಷೆಯ ಉಸ್ತುವಾರಿ ಹೊಂದಿರುವ ಸರ್ಕಾರಿ ಇಲಾಖೆಯವರ ಮೈಸೂರು ಟೂರ್ ಮ್ಯಾಪ್, ಗೈಡ್​ನಲ್ಲಿರುವ ಮೈಸೂರಿನ ನಕ್ಷೆಯಲ್ಲಿ ‘ಪ್ರಿನ್ಸೆಸ್ ರಸ್ತೆ’ಯನ್ನು ಗುರುತಿಸಿ ಹೆಸರಿಸಲಾಗಿದೆ.
  3. ಅಧಿಕೃತವಾಗಿ 1921ರಲ್ಲಿ ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯು ಇದೇ ರಸ್ತೆಗೆ ಪ್ರಿನ್ಸೆಸ್ ರಸ್ತೆ’ ಎಂದು ನಾಮಕರಣ ಮಾಡಿರುವುದಕ್ಕೆ ದಾಖಲೆ ಇದೆ.
+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments