#Exclusive Newsದೇಶ/ವಿದೇಶವಿಶೇಷಸುದ್ದಿ

ಸುನಿತಾ ವಿಲಿಯಮ್ಸ್​ಗೆ ಪ್ರಧಾನಿ ಭಾವುಕ ಪತ್ರ

ನವದೆಹಲಿ: ಬರೋಬ್ಬರಿ 9 ತಿಂಗಳ ಬಳಿಕ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ವಾಪಸಾಗುತ್ತಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗಿನ ಜಾವ ಸುನಿತಾ ವಿಲಿಯಮ್ಸ್ ಭೂಮಿಗೆ ಬಂದಿಳಿಯಲಿದ್ದಾರೆ.

ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರ ಸುರಕ್ಷಿತವಾಗಿ ವಾಪಾಸಾಗುವದಕ್ಕೆ ಕೋಟ್ಯಂತರ ಜನ ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರ ಸುರಕ್ಷಿತ ಲ್ಯಾಂಡಿಗ್​ಗೆ ಶುಭಕೋರಿ ಪತ್ರ ಬರೆದಿದ್ದಾರೆ.

ಪ್ರಧಾನಿ ಪತ್ರದಲ್ಲೇನಿದೆ..?

‘ಕ್ಷೇಮವಾಗಿ ಬನ್ನಿ’

ಭಾರತದ ಜನರ ಪರವಾಗಿ ನಿಮಗೆ ಶುಭಾಶಯ ಕೋರುತ್ತೇನೆ. ಭಾರತದ 140 ಕೋಟಿ ಜನ ಯಾವಾಗಲೂ ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಇತ್ತೀಚಿನ ಬೆಳವಣಿಗೆಗಳು ಮತ್ತೊಮ್ಮೆ ನಿಮ್ಮ ಸ್ಫೂರ್ತಿದಾಯಕ ಧೈರ್ಯ ಮತ್ತು ಪರಿಶ್ರಮವನ್ನ ಪ್ರದರ್ಶಿಸಿವೆ. ನೀವು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ನಮ್ಮ ಹೃದಯಗಳಿಗೆ ಹತ್ತಿರವಾಗಿದ್ದೀರಿ. ಭಾರತದ ಜನ ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಕಾರ್ಯಾಚರಣೆಯಲ್ಲಿ ಯಶಸ್ಸಿಗೆ ಪ್ರಾರ್ಥಿಸ್ತಿದ್ದಾರೆ. ನಿಮ್ಮ ತಾಯಿ ಬೋನಿ ಪಾಂಡ್ಯಾ ನಿಮ್ಮ ಬರುವಿಕೆಗಾಗಿ ಕಾಯ್ತಿದ್ದಾರೆ. ತಂದೆ ದೀಪಕ್ ಪಾಂಡ್ಯಾ ಆಶೀರ್ವಾದ ನಿಮ್ಮ ಮೇಲಿರುತ್ತೆ. ನಾನು ಬೈಡೆನ್, ಟ್ರಂಪ್​ರನ್ನು ಭೇಟಿಯಾದಾಗ ನಿಮ್ಮ ಯೋಗಕ್ಷೇಮದ ಬಗ್ಗೆ ಚರ್ಚೆ ನಡೆಸಿದ್ದೆ. ನೀವು ಬಾಹ್ಯಾಕಾಶದಿಂದ ವಾಪಸ್ ಬಂದ ಬಳಿಕ ನಿಮ್ಮನ್ನ ಭೇಟಿಯಾಗಲು ಎದುರು ನೋಡ್ತಿದ್ದೇವೆ. ಭಾರತದ ಹೆಮ್ಮೆಯ ಮಗಳಿಗೆ ಆತಿಥ್ಯ ವಹಿಸಲು ನಮಗೆ ಖುಷಿಯಾಗುತ್ತೆ. ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸ್ ಆಗಲು ನಿಮಗೆ, ಬುಚ್ ವಿಲ್ಮೋರ್​ಗೆ ಶುಭ ಹಾರೈಸುತ್ತೇವೆ.

ನರೇಂದ್ರ ಮೋದಿ, ಪ್ರಧಾನಿ

Comments (0)

Your email address will not be published. Required fields are marked *

Back to top button