#Exclusive Newsದೇಶ/ವಿದೇಶ
ದಾಳಿ ಮಾಡಿದವರನ್ನ ಹುಡುಕಿ ಕೊಲ್ಲುತ್ತೇವೆ ಪ್ರಧಾನಿ ಮೋದಿ ಶಪಥ..!

ಬಿಹಾರ : ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ 1 ನಿಮಿಷಗಳ ಕಾಲ ಮೌನಾಚರಣೆ ಮಾಡಿ ಭಾಷಣ ಆರಂಭಿಸಿದ್ದಾರೆ. ಭಯೋತ್ಪಾದಕರ ಮೇಲೆ ಪ್ರತೀಕಾರದ ದಾಳಿ ಮಾಡೇ ಮಾಡ್ತೀವಿ..ಒಬ್ಬೋಬ್ಬ ಭಯೋತ್ಪಾದಕನನ್ನು ಹುಡುಕಿ-ಹುಡುಕಿ ಕೊಲ್ಲುತ್ತೇವೆ ಎಂದು ಶಪಥ ಮಾಡಿದ ಪ್ರಧಾನಿ ನರೇಂದ್ರ ಮೋದಿ.
ಬಿಹಾರದಲ್ಲಿ ಹೇಳಿಕೆ ನೀಡಿದ ಮೋದಿ, ಊಹಿಸಲಾಗದಷ್ಟು ಮಟ್ಟಿಗೆ ಉಗ್ರರಿಗೆ ಶಿಕ್ಷೆ ಕೊಡುತ್ತೇವೆ ಎಂದಿದ್ದಾರೆ.ಭಯಾನಕ,ಭೀಕರ ಪ್ರತಿಕಾರ ತೀರಿಸಿಕೋಳ್ಳುತ್ತೇವೆ. ಉಗ್ರರು ಅಮಾಯಕರನ್ನು ಭೀಕರವಾಗಿ ಸಾಯಿಸಿದ್ದಾರೆ.ಪಹಲ್ಗಾಮ್ ದಾಳಿಯಿಂದ ಭಾರತ ದುಃಖದಲ್ಲಿದೆ ಎಂದು ಮೋದಿ ಹೇಳಿಕೆ ನೀಡಿದ್ದಾರೆ..
ಬಿಹಾರದ ಮಧುಬನಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಆಕ್ರೋಶಭರಿತವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.ಹುಡುಕಿ-ಹುಡುಕಿ ಕೊಲ್ಲುತ್ತೇವೆ, ದಾಳಿಗೆ ಕಾರಣರಾದವರನ್ನು ಯಾರನ್ನೂ ಬಿಡಲ್ಲ ಎಂದಿದ್ದಾರೆ.
ಈ ವೇಳೆ ನರೇಂದ್ರ ಮೋದಿ ಉಗ್ರರ ಬಲಿಗೆ ಮೃತ ಪಟ್ಟವರಿಗೆ ಸಂತಾಪ ಸೂಚಿಸಿದರು.




