ದೇಶ/ವಿದೇಶ

ಬ್ಯಾಂಕಾಕ್​ನಲ್ಲಿರೋ ಬೌದ್ಧ ಟೆಂಪಲ್​ಗೆ ಪ್ರಧಾನಿ ಮೋದಿ ಭೇಟಿ

ಬ್ಯಾಂಕಾಕ್: ಬಿಮ್‌ಸ್ಟೆಕ್ (BIMSTEC) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್‌ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿರುವ ವಾಟ್ ಫ್ರಾ ಬೌದ್ಧ ದೇವಾಲಯಕ್ಕೆ ಭೇಟಿ ನೀಡಿದರು.

ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರೊಂದಿಗೆ ಪ್ರಾದೇಶಿಕ ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದರು.

ಇದಕ್ಕೂ ಮುನ್ನ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಥಾಯ್ಲೆಂಡ್ ಉಪ ಪ್ರಧಾನಿ ಪ್ರಸೆರ್ಟ್ ಜಂತರರು ವಾಂಗ್ಟಾಂಗ್ ಮತ್ತು ಇತರ ಹಲವು ಉನ್ನತಾಧಿಕಾರಿಗಳು ಸ್ವಾಗತ ಕೋರಿದರು

ಬ್ಯಾಂಕಾಕ್‌ಗೆ ಭೇಟಿ ನೀಡಿದ ಮೋದಿ, ಥಾಯ್ ರಾಮಾಯಣ ಹಾಗೂ ಗರ್ಭಾ ನೃತ್ಯವನ್ನು ವೀಕ್ಷಿಸಿದರು. ಭಾರತ ಮತ್ತು ಥೈಲ್ಯಾಂಡ್ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸುವ ರಾಮಾಯಣದ ಥಾಯ್ ಆವೃತ್ತಿ `ರಾಮಕಿಯೆನ್’ ಅನ್ನು ವೀಕ್ಷಿಸಿದರು.

Comments (0)

Your email address will not be published. Required fields are marked *

Back to top button