ಜಿಲ್ಲೆರಾಜಕೀಯರಾಜ್ಯ

ಕನ್ನಡ ಹಾಡಿಗೆ ತಲೆತೂಗಿದ ಪ್ರಧಾನಿ ಮೋದಿ : ಪೂಜಿಸಲೆಂದೆ ಹೂಗಳ ತಂದೆ

ಕನ್ನಡದಲ್ಲಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಈ ನಿರೂಪಣೆಯ ಪ್ರಭು ಶ್ರೀರಾಮನ ಭಕ್ತಿಯ ಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಮೋದಿ ಬಣ್ಣಿಸಿದ್ದಾರೆ.

ಕನ್ನಡದ ಹಾಡಿಗೆ ತಲೆದೂಗಿರುವ ಪ್ರಧಾನಿ ನರೇಂದ್ರ ಮೋದಿ ಆ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್  ಅವರು ಯೂಟ್ಯೂಬ್​ನಲ್ಲಿ ಹಾಡಿರುವ , ಪೂಜಿಸಲೆಂದೇ ಹೂಗಳ ತಂದೆ ಹಾಡಿನ ಲೊಂಕ್​ಅನ್ನು ಸಾಮಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಮುಂದೆ ಕೊಂಡೊಯ್ಯುತ್ತವೆ .

ಕನ್ನಡದಲ್ಲಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಮೋದಿ ಬಣ್ಣಿಸಿದ್ದಾರೆ.

ಪೂಜಿಸಲೆಂದೇ ಹೂಗಳ ತಂದೆ ಹಾಡು ಮೂಲತಃ  ದೊರೈ ಭಗವಾನ್ ಜೋಡಿಯಿಂದ ನಿರ್ದೇಶಿಸಲ್ಪಟ್ಟ ರಾಗ್​ಕುಮಾರ್ ನಟನೆಯ ಎರಡು ಕನಸು ಸಿನಿಮಾದ ಹಾಡು. ಕನ್ನಡದ ಶ್ರೇಷ್ಠ ಪ್ರಣಯ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಈ ಸಿನಿಮಾ 1974 ರಲ್ಲಿ ಈ ಸಿನಿಮಾ ತೆರೆ ಕಾಣಿತ್ತು.

ಇದೀಗ ಅದೇ ಹಾಡನ್ನು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಭಾವನಾತ್ಮಕವಾಗಿ ಹಾಡಿ ಯೂಟ್ಯೂಬ್​ನಲ್ಲಿ ಪ್ರಕಟಿಸಿದರು. ಇದಕ್ಕೆ ಪ್ರಧಾನಿ ಮೋದಿ ತಲೆದೂಗಿದ್ದಾರೆ.

 

Comments (0)

Your email address will not be published. Required fields are marked *

Back to top button