ರಾಜಕೀಯ

ವಕ್ಫ್​ ಬಿಲ್​​ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ನವದೆಹಲಿ: ಸಂಸತ್ತಿನ ಎರಡೂ  ಸದನಗಳು ಅಂಗೀಕರಿಸಿದ್ದ ವಕ್ಫ್(ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ತಮ್ಮ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಇಂದಿನಿಂದ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದಿದೆ.

ರಾಜ್ಯಸಭೆಯಲ್ಲಿ, ಮಸೂದೆಯನ್ನು 128 ಸದಸ್ಯರು ಪರವಾಗಿ  ಮತ್ತು 95 ಸದಸ್ಯರು ವಿರೋಧಿಸಿ ಮತ ಚಲಾಯಿಸಿರುವ ಮೂಲಕ ಅಂಗೀಕಾರಿಸಲಾಯಿತು. ಗುರುವಾರ ಮುಂಜಾನೆ ಲೋಕಸಭೆಯಲ್ಲಿ 288 ಸದಸ್ಯರು ಇದನ್ನು ಬೆಂಬಲಿಸದರು ಮತ್ತು 232 ಸದಸ್ಯರು ಅದರ ವಿರುದ್ಧ ಮತ ಚಲಾಯಿಸಿದರು. ಇದೀಗ ಕೊನೆಗೂ ರಾಷ್ಟ್ರಪತಿ ಅಂಕಿತ ದೊರಕಿದೆ.

ಹೊಸ ಕಾನೂನು ಪಕ್ಷಪಾತ, ವಕ್ಫ್ ಆಸ್ತಗಳ ದುರಪಯೋಗ ಮತ್ತು ವಕ್ಫ್​ ಆಸ್ತಿಗಳ ಮೇಲಿನ ಅತಿಕ್ರಮಣವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್​​ಡಿಎ) ಸರ್ಕಾರವು ಕಾನೂನು ಮುಸ್ಲಿಂ ವಿರೋಧಿಯಲ್ಲ ಎಂದು ಹೇಳಿದೆ.

ಈ ಹೊಸ ಕಾನೂನನ್ನು ಕಾಂಗ್ರೆಸ್​​, ಎಐಎಂಐಎಂ ಮತ್ತು ಆಮ್​ ಆದ್ಮಿ ಪಕ್ಷ ಪ್ರತ್ಯೇಕ ಅರ್ಜಿಗಳ ಮೂಲಕ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿವೆ.

Comments (0)

Your email address will not be published. Required fields are marked *

Back to top button