Top Newsರಾಜ್ಯಸುದ್ದಿ

ಮಹಾಕುಮಭ ಮೇಳದಲ್ಲಿ ಪ್ರಕಾಶ್ ರಾಜ್ ಪುಣ್ಯಸ್ನಾನ, ಪೋಟೋ ವೈರಲ್!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಬಹುಭಾಷಾ ನಟ ಪ್ರಕಾಶ್‌ ರೈ ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು ಎಂದು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕುಂಭಮೇಳದಲ್ಲಿ ಭಾಗವಹಿಸಿ ಪ್ರಕಾಶ್ ರಾಜ್ ಪುಣ್ಯಸ್ನಾನ ಮಾಡಿದ್ದಾರೆ. ಅವರ ಪಾಪಗಳು ತೊಳೆದು ಹೋಗಲಿ ಎಂದು ಆಶಾಭಾವನೆ ವ್ಯಕ್ತಪಡಿಸೋಣ ಎಂದು ಸಂಬರಗಿ ತಾನು ಹಂಚಿಕೊಂಡ ಫೋಟೋಗೆ ಕ್ಯಾಪ್ಶನ್ ಬರೆದಿದ್ದಾರೆ. ಆದರೆ, ಪೋಸ್ಟ್​​ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪ್ರಕಾಶ್ ರಾಜ್ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಸುಳ್ಳು ರಾಜ ಹೇಡಿಗಳ ಸೈನ್ಯಕ್ಕೆ.. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ. ಪೊಲೀಸ್ ದೂರು ದಾಖಲಾಗಿದೆ. ಕೋರ್ಟ್​​​ನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ ಎಂದು ತಮ್ಮ ಅಭಿಪ್ರಾಯವನ್ನು ಪೋಸ್ಟ್ ಮಾಡಿದ್ದಾರೆ.

ಇದು ಸುಳ್ಳು ಸುದ್ದಿಯಾಗಿದ್ದು, ನಿಮ್ಮಂತಹವರೇ ಹಂಚಿಕೊಂಡರೇ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಸಿಕ್ಕ ಅವಕಾಶ ಬಿಡಬಾರದು. ಎಡಪಂಥವನ್ನು ಪ್ರಚಾರ ಮಾಡುವ ಪ್ರಕಾಶ್​ಗೆ ಅಲ್ಲಿ ಏನು ಕೆಲಸ ಎಂದು ಪ್ರಕಾಶ್ ರೈ ಅವರನ್ನು ನೀಂದಿಸಿದ್ದಾರೆ. ಇನ್ನೂ ಕೆಲವರು ಇದು ಕೃತಕ ಬುದ್ದಿಮತೆ ದೃಶ್ಯದ ಭಾವಚಿತ್ರ ಇರಬೇಕು. ಪ್ರಕಾಶ್ ರೈ ಅಲ್ಲಗೆ ಹೋಗುವ ಚಾನ್ಸ್ ಖಡಾಖಂಡಿತವಾಗಿ ಹೇಳಿದ್ದಾರೆ. ಫ್ಯಾಕ್ಟ್ ಚೆಕ್ ಮಾಡಿದಾಗ ಇದು ಎಐ ಬಳಸಿ ನಿರ್ಮಿಸಿರುವ ಚಿತ್ರ ಎಂದು ತಿಳಿದು ಬಂದಿದೆ.ಸಂಬರಗಿ ಅವರ ಮೇಲೆ ದೂರು ದಾಖಲಾಗಿದೆ.

 

Comments (0)

Your email address will not be published. Required fields are marked *

Back to top button