ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ 42ನೇ ಎಸಿಎಂಎಂ ಜನಪ್ರತಿನಿಧಿಗಳ ಕೋರ್ಟ್ 6 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿದೆ. ಇದರ ಬೆನ್ನಲ್ಲೇ ಎಸ್ಐಟಿ ಕಚೇರಿಯಲ್ಲಿ ಪ್ರಜ್ವಲ್ನನ್ನು ತನಿಖಾಧಿಕಾರಿಗಳು ಲಾಕ್ ಮಾಡಿಕೊಂಡು, ಮೊದಲ ರಾತ್ರಿಯೇ ತೀವ್ರ ವಿಚಾರಣೆ ಮಾಡಿದ್ದಾರೆ.
ಅತ್ಯಾಚಾರ ಕೇಸ್ನಲ್ಲಿ ಅರೆಸ್ಟ್ ಆಗಿರುವ ಪ್ರಜ್ವಲ್ನನ್ನು ಕೋರ್ಟ್ ಎಸ್ಐಟಿ ಕಸ್ಟಡಿಗೆ ಕೊಡ್ತಿದ್ದಂತೆ, ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿ 10 ಗಂಟೆವರೆಗೂ ಪ್ರಜ್ವಲ್ಗೆ ಪ್ರಕರಣದ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರಂತೆ. ಪ್ರಕರಣ ಸಂಬಂಧ ಅಧಿಕಾರಿಗಳಿಗೆ ಯಾವುದೇ ಪ್ರಶ್ನೆಗಳಿಗೆ ಪ್ರಜ್ವಲ್ ಸೂಕ್ತ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ. ಇದು ರಾಜಕೀಯ ಪಿತೂರಿ. ಈ ಪ್ರಕರಣದಲ್ಲಿ ಸುಖಾಸುಮ್ಮನೆ ನನ್ನನ್ನು ಸಿಲುಕಿಸಲಾಗಿದೆ. ನಿಮ್ಮ ಕೆಲಸವನ್ನು ನೀವು ಮಾಡಿ, ನಾನೇನು ಹೇಳಲ್ಲ. ಸಂತ್ರಸ್ತೆಯರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಎಸ್ಐಟಿ ತನಿಖಾಧಿಕಾರಿಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ.
ಎಸ್ಐಟಿ ಮುಂದೆ ಹಾಜರಾಗುವುದಕ್ಕೂ ಮೊದಲೇ ಅಧಿಕಾರಿಗಳ ವಿಚಾರಣೆ ಯಾವ ರೀತಿ ಎದುರಿಸಬೇಕೆಂದು ಪ್ರಜ್ವಲ್ ಕಾನೂನು ಸಲಹೆ ಪಡೆದಿದ್ದರು. ಹೀಗಾಗಿ ರಾತ್ರಿ ಎಸ್ಐಟಿ ವಿಚಾರಣೆಗೆ ಪ್ರಜ್ವಲ್ ಸೂಕ್ತ ರೀತಿ ಸಹಕಾರ ನೀಡಿಲ್ವಂತೆ. ಇದರಿಂದ ಎಚ್ಚೆತ್ತ ಎಸ್ಐಟಿ ತನಿಖಾ ತಂಡ, ಇವತ್ತು ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಧರಿಸಿದೆ.
ಟೆಕ್ನಿಕಲ್ ಎವಿಡೆನ್ಸ್ಗಳನ್ನು ಮುಂದಿಟ್ಟು, ಪ್ರಜ್ವಲ್ ರೇವಣ್ಣನ ವಿಚಾರಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ನಾಳೆ ಅಥವಾ ನಾಡಿದ್ದು, ಪ್ರಜ್ವಲ್ ರೇವಣ್ಣರನ್ನು ಹೊಳೆನರಸೀಪುರಕ್ಕೆ ಕರೆದೊಯ್ದು ಸ್ಥಳಮಹಜರು ಮಾಡುವ ಸಾಧ್ಯತೆ ಇದೆ. ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಎಸ್ಐಟಿ ಪಂಜರ ಸೇರಿರುವ ಪ್ರಜ್ವಲ್, ಮೊದಲರಾತ್ರಿ ಕಳೆದಿದ್ದಾರೆ. ಮೊದಲ ದಿನವಾದ ಕಾರಣ ರಾತ್ರಿ 10ರವರೆಗೆ ತನಿಖೆ ನಡೆಸಿದ ಎಸ್ಐಟಿ ಬಳಿಕ ಪ್ರಜ್ವಲ್ಗೆ ವಿಶಾಂತ್ರಿ ಪಡೆಯಲು ಅವಕಾಶ ನೀಡಿದೆ. ವಿಚಾರಣೆ ಬಳಿಕ ಸ್ವಲ್ಪಹೊತ್ತು ಹಾಗೇ ಕುಳಿತಿದ್ದ ಪ್ರಜ್ವಲ್ ಬಳಿಕ ನಿದ್ರೆಗೆ ಜಾರಿದ್ರು ಎಂಬ ಮಾಹಿತಿ ಸಿಕ್ಕಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com