ಬೀದರ್ : ಪಶು ಸಂಗೋಪನಾ ಇಲಾಖೆ ಕುರಿತಾಗಿ ಹಾಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರಿಗೆ ಯಾವುದೆ ಮಾಹಿತಿ ಇಲ್ಲಾ, ಹಾಗಾಗಿ ಅವರನ್ನ ಕೂಡಲೇ ಬದಲಾಯಿಸಬೇಕು ಎಂದು ಸಿಎಂಗೆ ಮಾಜಿ ಸಚಿವ ಪ್ರಭು ಚೌಹಾಣ್ ಒತ್ತಾಯಿಸಿದ್ರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಾಲಿ ಪಶು ಸಂಗೋಪನಾ ಸಚಿವರು ಇದುವರೆಗೆ ಒಂದು ಮೀಟಿಂಗ್ ಮಾಡಿಲ್ಲ. ಅವರಿಗೆ ಇಲಾಖೆ ಕುರಿತು ಯಾವುದೇ ಮಾಹಿತಿ ಇಲ್ಲಾ ಎಂದರು. ಜೊತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಮಾತೆ ರಕ್ಷಣೆಗಾಗಿ ಮಾಡಲಾಗಿದ್ದ ಎಲ್ಲ ಯೋಜನೆಗಳನ್ನ ಕಾಂಗ್ರೆಸ್ ಸರ್ಕಾರ ಬಂದ್ ಮಾಡುತ್ತಿದ್ದಾರೆ.
ಇನ್ನು, ಗೋಮಾತೆ ರಕ್ಷಣೆಗಾಗಿ ಗೋ ಹತ್ಯಾ ಕಾನೂನು ತಂದಿದ್ದೇವು. ಆದ್ರೆ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆ ಯಾವುದೇ ಗಮನ ಹರಿಸುತ್ಗಿಲ್ಲಾ. ಎಲ್ಲಾ ಕಡೆ ಹಸುಗಳ ಹತ್ಯೆ ನಡೆಯುತ್ತಿದೆ. ರೈತರ ಏಳಿಗೆಗೆ ಪ್ರಾಣಿ ಸಹಾಯ ಕೇಂದ್ರ ಆರಂಭ ಮಾಡಿದೇವು. ಪುಣ್ಯಕೋಟಿ ದತ್ತು ಯೋಜನೆ ಹಾಗೂ ಗೋಶಾಲೆ, ಪಶು ಸಂಜೀವಿನಿ 1962 ಸಹಾಯವಾಣಿ ಆರಂಭ ಮಾಡಿದ್ದೇವು, ಆದ್ರೆ ಕಾಂಗ್ರೆಸ್‌ನವರು ಎಲ್ಲವನ್ನು ಬಂದ್ ಮಾಡಿದ್ದಾರೆ. ಗೋಮಾತೆ ಸಂಬಂಧಿತ ಎಲ್ಲಾ ಯೋಜನೆಗಳನ್ನ ಮತ್ತೆ ಆರಂಭಿಸಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಗೋವುಗಳ ಜೊತೆ ಪ್ರತಿಭಟನೆ ಮಾಡ್ತೇವೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ರು.