Freedom tv desk :
ಹೈಲೈಟ್ಸ್
. ಪ್ರಭಾಸ್,ಶೃಉತಿ ಹಾಸನ್, ಮಧು ಗುರುಸ್ವಾಮಿ ನಟನೆಯ ಸಲಾರ್ ಸಿನಿಮಾ
. ಸಲಾರ್ ಸಿನಿಮಾದಲ್ಲಿ ಪ್ರಶಾಂತ್ ನೀಲ್ ನಿರ್ದೇಶನ
. ಸಲಾರ್ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿತು?

ಪ್ರಶಾಂತ್ ನೀಲ್ ಅವರು ಪ್ರಭಾಸ್ ಜೊತೆಗೆ ಸಿನಿಮಾ ಘೋಷಣೆ ಮಾಡಿದಾಗ ಹೇಗೆ ಸಿನಿಮಾ ಮೂಡಿಬರಲಿದೆ ಎಂಬ ಕುತೂಹಲದಲ್ಲಿದ್ದರು. ಉಗ್ರಂ , ಕೆಜಿಎಫ್, ಕೆಜಿಎಫ್ 2 ನಂತಹ ಸಿನಿಮಾಗಳನ್ನು ನೀಡಿರುವ ಪ್ರಶಾಂತ್ ನೀಲ್ ಅವರು ಸಲಾರ್ ಚಿತ್ರದಲ್ಲಿ ಏನು ಮೋಡಿ ಮಾಡಲಿದ್ದಾರೆ ಎಂಬ ಪ್ರಶ್ನೆ ಇತ್ತು. ಸಲಾರ್ ಅದ್ದೂರಿಯಾಗಿ ತೆರೆಕಂಡು ಮಿಶ್ರ ಪ್ರಕ್ರಿಯೆಯನ್ನು ಪಡೆದಿದೆ.
ಎಷ್ಟು ಕಲೆಕ್ಷನ್ ಮಾಡಿದೆ ಸಲಾರ್..?
ಸಲಾರ್ ಸಿನಿಮಾ ರಿಲೀಸ್ ಆಗಿ ವಿಮರ್ಶೆ ಪಡೆದುಕೊಂಡ ನಂತರದಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ. ಸಲಾರ್ ರಿಲೀಸ್ ಆದ ಮೊದಲ ದಿನವೇ178.7 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಆ ಮೂಲಕ 2023ರಲ್ಲಿ ರಿಲೀಸ್ ಆದ ಮೊದಲ ದಿನ ಅತಿ ಹೆಚ್ಚುಗಳಿಕೆ ಮಅಡಿದ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಶಾರುಖ್ ಖಾನ್ ಅವರ ಪಠಾಣ್, ಜವಾನ್ ಸಿನಿಮಾ ಕಲೆಕ್ಷನ್ನ್ನು ಸಲಾರ್ ಬೀಟ್ಮಾಡಿದೆ. ಜವಾನ್ ಸಿನಿಮಾವು 75 ಕೋಟಿ ರೂಪಾಯಿ, ಅನಿಮಲ್ ಸಿನಿಮಅ ರಿಲೀಸ್ ಆದ ಮೊದಲ ದಿನವೇ 63 ಕೋಟಿ ರೂಪಾಯಿ ಕಲೆಕ್ಷನ್ ಮಅಡಿತ್ತು. ಪಠಾಣ್ ಸಿನಿಮಾವು ಮೊದಲ ದಿನ 57 ಕೋಟಿರೂಪಾಯಿ ಕಲೆಕ್ಷನ್ ಮಅಡಿತ್ತು. ನಾಳೆ ವಿಕೆಂಡ್ ಕೂಡ ಇರೋದರಿಂದ ಎಷ್ಟು ಹಣಗಳಿಕೆ ಮಾಡಬಹುದು ಎಂಬ ಕೂತುಹಲವಿದೆ.
ಸಿನಿಮಾ ಕಥೆ ಏನು..??
ಸಲಾರ್ ಸಿನಿಮಾದಲ್ಲಿ ಸ್ನೇಹದ ಶಕ್ತಿ ಮತ್ತು ಅಧಿಕಾರಕ್ಕಾಗಿ ನಡೆಯುವ ಯುದ್ಧವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ ಚಿತ್ರ ಖ್ಯಾತಿಯ ಹೊಂಬಾಳೆ ಫಿಲ್ಸ್ಮ್ ವತಿಯಿಂದ ವಿಜಯ್ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಇದರ ಕಥೆ ಖಾನ್ಸಾರ್ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯಲಿದೆ. ಇದರಲ್ಲಿ ಪ್ರಶಾಂತ್ ನೀಲ್ ಹಿಂದೆಂದೂ ಕಾಣದಿದ್ದಂತಹ ಸಿನಿಮ್ಯಾಟಿಕ್ ಅನುಭವ ಕಟ್ಟಿಕೊಡಲು ಸಜ್ಜಾಗಿದೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಖಾನ್ಸಾರ್ ನಗರದ ಮೇಲಿರುವ ಅಧಿಕಾರಕ್ಕಾಗಿ ಮೂರು ಬುಡಕಟ್ಟು ಜನಾಂಗಗಳ ನಡುವೆ ನಡೆಯುವ ಕಅದಾಟ ಹಾಗೂ ದೇವ ಮತ್ತು ವರದರಾಜ ಮನ್ನಅರ್ ನಡುವಿನ ಗಾಢಸ್ನೇಹ ಸಂಬಂಧ ಈ ಸಿನಿಮಾದ ಪ್ರಮುಖ ಹೈಲೈಟ್. ಖಾನ್ಸಾರ್ ನಗರದ ಹಿಡಿತಕ್ಕಾಗಿ ನಡೆಯುವ ರಾಜಕೀಯ, ಭಾವನಾತ್ಮಕ ಸನ್ನಿವೇಶ, ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಈ ಚಿತ್ರದಲ್ಲಿದ್ದು, ಇವೆಲ್ಲವೂ ಪ್ರೇಕ್ಷಕರಿಗೆ ಹಿಂದೆದೂ ಕಅಣದ ಅನುಭವ ನೀಡಲಿದೆ.