Freedom tv Desk :
ಲಾಸ್ ಏಂಜಲ್ಸ್ ಮೂಲದ ಜನಪ್ರಿಯ ಸ್ಪಾಂಡಪ್ ಕಾಮಿಡಿಯನ್ ನೀಲ್ ನಂದಾ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಜನಪ್ರಿಯ ಸ್ಪಾಂಡಪ್ ಕಾಮಿಡಿಯನ್ ನೀಲ್ ನಂದಾ ನಿಧನರಾಗಿದ್ದಾರೆ. ಜಿಮ್ಮಿ ಮತ್ತು ಕಿಮೆಲ್ ಲೈವ್ ಮತ್ತು ಕಾಮಿಡಿ ಸೆಂಟ್ರಲ್ನ ಅದಾಮ್ ಡಿವೈನ್ ಹೌಸ್ ಪಾರ್ಟಿ ಮುಂತಾದ ಕಾರ್ಯಕ್ರಮಗಳಿಂದ ಜನಪ್ರಿಯತೆ ಪಡೆದಿದ್ದರು.
ನೀಲ್ ನಂದ ನಿಧನರಾಗಿರುವ ಬಗ್ಗೆ ಅವರ ಮ್ಯಾನೆಜರ್ ಗ್ರೆಗ್ ವೈಸ್ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ನೀಲ್ ನಂದಾ ನಿಧನರಾಗಿರುವ ಕಾರಣ ಬಗ್ಗೆ ಇನ್ನೂ ಬಹಿಂರಂಗವಾಗಿಲ್ಲ. ಅವರ ನಿಧನದ ನಂತರ , ಹಲವಾರು ಖ್ಯಾತ ಹಾಸ್ಯಗಾರರು ಪೋಸ್ಟ್ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ. ಅವರು ಜಾರ್ಜಿಯಾದ ಅಟ್ಲಾಂಟಾದಲ್ಲಿ ಭಾರತೀಯ ವಲಸಿಗ ದಂಪತಿಗೆ ಜನಿಸಿದರು.
ನೀಲ್ ನಂದಾ ಅವರಿಗೆ ವಿವಿಧ ಹಾಸ್ಯ ಕ್ಲಬ್ಗಳು ಮತ್ತು ಅವರ ಸಹೋದ್ಯೋಗಿಗಳು , ಫ್ಯಾನ್ಸ್ ಸೋಷಿಯಲ್ ಮೀಡಿಯಅದಲ್ಲಿ ಸಂತಾಪ ಸೂಚಿಸಿದ್ದಾರೆ. ನೀಲ್ ನಂದಾ ಇತ್ತೀಚೆಗಷ್ಟೇ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
ನೀಲ್ ನಂದಾ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ ಈ ಸುದ್ದಿ ಕೇಳಿ ಆಘಾತವಾಯ್ತು. ಪಾಸಿಟಿವ್ ಶಕ್ತಿ ಅವರಾಗಿದ್ದರು. ಹಾಸ್ಯಕ್ಕೆ ಒಂದು ದೊಡ್ಡ ನಷ್ಟವಾಗಿದೆ. ಲಾಸ್ ಏಂಜಲೀಸ್ ನಗರದಲ್ಲಿ ಟಾಪ್ 10 ಸ್ಟ್ಯಾಂಡ್ – ಆಫ್ ಕಾಮಿಡಿ ಶೋಗಳಲ್ಲಿ ನೀಲ್ ನಂದಾ ಶೋ ಕೂಡ ಹೆಸರುವಾಸಿಯಾಗಿದ್ದರು.