ಜಿಲ್ಲೆಶಿಕ್ಷಣ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಶಾಲೆಗಳ ದುಸ್ಥಿತಿ

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಶಾಲೆಗಳ ದುಸ್ಥಿತಿ ಹೇಳತೀರದು. ಶೌಚಕ್ಕೆ ಸರತಿ ಸಾಲಿನಲ್ಲಿ ಕನ್ನಡ ಶಾಲೆಯ ವಿದ್ಯಾರ್ಥಿಗಳು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಖುರ್ದ್‌ ಸರ್ಕಾರಿ ಕನ್ನಡ ಶಾಲೆ ಮಕ್ಕಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಆ ಕುರಿತ ಫ್ರೀಡಂ ಟಿವಿ ವಿಶೇಷ ವರದಿ ಇಲ್ಲಿದೆ.

ಇದು ಬಸ್ ನಿಲ್ದಾಣದಲ್ಲಿನ ಶೌಚಾಲಯವೋ ಅಥವಾ ರೈಲ್ವೆ ನಿಲ್ದಾಣದ ಶೌಚಾಲಯವೋ ಅಲ್ಲ. ಅಲ್ಲದೇ ಸಾರ್ವಜನಿಕ ಶೌಚಾಲಯವೂ ಅಲ್ಲ. ಸರ್ಕಾರಿ ಶಾಲೆಯ ಶೌಚಾಲಯದ ಮುಂದೆ ಇರುವ ಒಂದೇ ಶೌಚಾಲಯಕ್ಕೆ ಸಾಲುಗಟ್ಟಿ ವಿದ್ಯಾರ್ಥಿಗಳು ಸಾಲು ಗಟ್ಟಿ ನಿಂತಿರುವುದು. ಇದು ಕೇವಲ ಒಂದು ದಿನದ ಕಥೆಯಲ್ಲ. ಕಳೆದ ಎರಡ್ಮೂರು ವರ್ಷಗಳಿಂದ ಮಕ್ಕಳು ತಮ್ಮ ನೈಸರ್ಗಿಕ ಕರೆಗೆ ಪರದಾಡುತ್ತಿದ್ದಾರೆ. ಆದರೆ ಜ‌ನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಇತ್ತ ಕಡೆ ತಿರುಗಿಯೂ ನೋಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಕಂಗ್ರಾಳಿ ಖುರ್ದ ಗ್ರಾಮದಲ್ಲಿ 1986ರಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಪಾಟೀಲ ಪುಟ್ಟಪ್ಪ ಅವರಿಂದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಯಾಗಿದೆ. 1ರಿಂದ 8ನೇ ತರಗತಿಯವರಗೆ ಒಟ್ಟು 354 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, 10 ಶಿಕ್ಷಕರಿದ್ದಾರೆ. ಇನ್ನು ಈ ಶಾಲೆಯಲ್ಲಿ 16 ಕೊಠಡಿಗಳಿವೆ. ಮರಾಠಿ ಭಾಷೆ ಪ್ರಾಬಲ್ಯ ಇರುವ ಈ ಭಾಗದಲ್ಲಿ ಕನ್ನಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಿದ್ದರೂ ಸಹ ಶೌಚಕ್ಕೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿಯಿದೆ. ಒಂದು ಕಡೆ ಬಾಲಕಿಯರ ಸರತಿ ಸಾಲು, ಇನ್ನೊಂದು ಕಡೆ ಬಾಲಕರ ಸಾಲು ನಿತ್ಯ ಸಾಮಾನ್ಯವಾಗಿದೆ. ಹೀಗೆ ಅರ್ಧ ಗಂಟೆಗೂ ಹೆಚ್ಚು ಕಾಲ ನಿಲ್ಲಬೇಕಿದೆ‌. ಒಮ್ಮೊಮ್ಮೆ ಮಕ್ಕಳು ಹೊರಗೆ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆಯಿದೆ.

ಮರಾಠಿಗರ ತುಷ್ಠಿಕರಣಕ್ಕೆ ಬೆಳಗಾವಿಯ ಅಧಿಕಾರಿಗಳೂ ನಿಂತರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಬೆಳಗಾವಿ ಜಿಲ್ಲಾಡಳಿತ ಮತ್ತು ಶಿಕ್ಷಣ‌ ಇಲಾಖೆ ಸಮನ್ವಯತೆ ಕೊರತೆಯೇ ಇದಕ್ಕೆ ಕಾರಣವಾ..? ಆಟದ ಸಮಯವನ್ನೂ ಸರತಿ ಸಾಲಿನಲ್ಲೆ ನಿಂತು ಮಕ್ಕಳು ಕಳೆಯಬೇಕಿದೆ. ಅಲ್ಲದೇ ಕೆಲವೊಮ್ಮೆ ತರಗತಿಗೂ ಹೋಗಲು ವ್ಯತ್ಯಯವಾಗುತ್ತಿದೆ.

Comments (0)

Your email address will not be published. Required fields are marked *

Back to top button