ಸದ್ಯ ಬಾಲಿವುಡ್​ ನಟಿ, ಹಾಟ್​ ಬ್ಯೂಟಿ ಪೂನಂ ಪಾಂಡೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಬರ್ತ್​ಡೇ ಪಾರ್ಟಿಯೊಂದಕ್ಕೆ ಹೋದ ಸಮಯದಲ್ಲಿ ಅಂಡರ್​ವೇರ್​ ಧರಿಸದೇ ಸದ್ದು ಮಾಡಿರೋ ಪೂನಂ ಪಾಂಡೆಯ ಈ ವಿಡಿಯೋ ವೈರಲ್​ ಆಗುತ್ತಲೇ ಇದೆ. ನಟಿಯೊಬ್ಬರ ಹುಟ್ಟುಹಬ್ಬದಂದು ಪೂನಂ ಪಾಂಡೆ ಹೋಗಿದ್ದ ಸಂದರ್ಭದಲ್ಲಿ, ಆಕೆಯ ಸ್ನೇಹಿತೆ ಖುಷಿಯಿಂದ ಎತ್ತುಕೊಂಡಾಗ ಕಾಣಬಾರದ್ದೆಲ್ಲಾ ಕಂಡುಬಿಟ್ಟಿದೆ. ನಂತರ ಹಿಂಭಾಗವನ್ನು ಕೈಯಿಂದ ಮುಚ್ಚಿಕೊಳ್ಳಲು ನೋಡಿದ್ದರೂ ಅದು ಸಾಧ್ಯವಾಗಲಿಲ್ಲ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ, ತಾವು ಒಳ ಉಡುಪು ಧರಿಸಿದ್ದರೂ ಅದು ಕಾಣಿಸಲಿಲ್ಲ ಎಂದೆಲ್ಲಾ ನಟಿ ಸಮಜಾಯಿಷಿ ಕೊಡುತ್ತಲೇ ಇದ್ದಾರೆ.

ಸದ್ಯ ಈಕೆ ಬೆಂಗಳೂರಿಗೆ ಬರುತ್ತಿದ್ದಾರೆ. ಕರ್ನಾಟಕಕ್ಕೆ ನೀಡುವ ಮೊದಲ ಭೇಟಿ ಇದಾಗಿದೆ. ಬೆಂಗಳೂರಿನ ಟಾಪ್ ಸೆಲೆಬ್ರಿಟಿ ಹಾಟ್‌ಸ್ಪಾಟ್ ಆಗಿರುವ ಶುಗರ್ ಫ್ಯಾಕ್ಟರಿ ರಿಲೋಡೆಡ್ ಕ್ಲಬ್​ ತನ್ನ 2 ನೇ ವಾರ್ಷಿಕೋತ್ಸವವನ್ನು ಅಬ್ಬರದಿಂದ ಆಚರಿಸುತ್ತಿದೆ.  ಕೋರಮಂಗಲದಲ್ಲಿರುವ ಐಷಾರಾಮಿ ಕ್ಲಬ್ ಖ್ಯಾತ ನಟ ಮತ್ತು ಉದ್ಯಮಿ ಅರುಣ್ ರಾಮ್ ಗೌಡ ಅವರ ಒಡೆತನದಲ್ಲಿದೆ ಮತ್ತು ಗ್ಲಾಮರ್ ಮತ್ತು ರಾತ್ರಿಜೀವನದ ಅಂತಿಮ ತಾಣವಾಗಿ ಖ್ಯಾತಿಯನ್ನು ಗಳಿಸಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪೂನಂ ಪಾಂಡೆ ಬರುತ್ತಿದ್ದಾರೆ.

ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಒ೦ದು ಮೀಮ್ಸ್‌, ಅದೇನೆಂದ್ರೆ ಯಾವ ಬಣ್ಣದ ಚೆಡ್ಡಿ ಧರಿಸಿದ್ದಿ, ಎಂದು ಹೇಳಿದ್ದಾರೆ. ಈ ಮೂಲಕ, ತಾವು ಚೆಡ್ಡಿಯನ್ನು ಧರಿಸಿರುವುದಾಗಿ ಸಮಜಾಯಿಷಿ ಕೊಟ್ಟಿದ್ದರು.

 

Leave a Reply

Your email address will not be published. Required fields are marked *

Verified by MonsterInsights