ಪುನೀತ್ರ ಪ್ರೀತಿ ವಿಚಾರ ಹೇಳಿದಾಗ ರಾಜಕುಮಾರ ಅವರ ರಿಯಾಕ್ಷನ್ ಹೇಗಿತ್ತು ಅನ್ನೊ ಕುತೂಹಲ ಎಲ್ಲರನ್ನು ಕಾಡಿದ್ದು ಸುಳ್ಳಲ್ಲ. ಅಶ್ವಿನಿ ಅವರೊಂದಿಗಿನ ಅವರ ಪ್ರೀತಿಯ ವಿಚಾರವನ್ನು ತಂದೆ ರಾಜ್‌ಕುಮಾರ ಅವರ ಮುಂದೆ ಹೇಳಿದಾಗ ತಂದೆ ಡಾ. ರಾಜ್‌ಕುಮಾರ್ ಸಂತೋಷದಿಂದ ಒಪ್ಪಿಕೊಂಡರು.ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಇಂದು ನಮ್ಮ ಜೊತೆ ಇಲ್ಲ.
ಅವರು ನಿಧನರಾಗಿ ಇಂದಿಗೆ ಬರೋಬ್ಬರಿ 4 ವರ್ಷಗಳು ಕಳೆದು ಹೋಗಿವೆ. ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಅವರು ಪ್ರೀತಿಸಿ ಮದುವೆ ಆದವರು. ಅಶ್ವಿನಿ ಚಿಕ್ಕಮಗಳೂರಿನವರು. ಪುನೀತ್ ಅವರು ಮೇರು ನಟ ರಾಜ್ಕುಮಾರ್ ಮಗ. ಪುನೀತ್ ಹಾಗೂ ಅಶ್ವಿನಿ ಪ್ರೀತಿಗೆ ಕುಟುಂಬದವರು ಒಪ್ಪಿಗೆ ಕೊಟ್ಟ ಬಳಿಕವೇ ಮದುವೆ ಆದರು. ಪುನೀತ್ ರಾಜ್ಕುಮಾರ್ ಅವರು ಪ್ರೀತಿ ವಿಚಾರವನ್ನು ತುಂಬಾನೇ ಭಯದಲ್ಲೇ ತಂದೆ ಬಳಿ ಹೇಳಿಕೊಂಡಿದ್ದರು.
ಈ ಬಗ್ಗೆ ಪುನೀತ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿರುವ ಪ್ರಕಾರ ಆಗ ಪುನೀತ್ ಅವರಿಗೆ 24 ವರ್ಷಗಳ ಪ್ರಾಯ ರಾಜ್‌ಕುಮಾರ್ ಅವರಿಗೆ 70+ ವರ್ಷ ಆಗಿತ್ತು. ಜನರೇಶನ್ ಗ್ಯಾಪ್ ಇರುವುದರಿಂದ ರಾಜ್ಕುಮಾರ್ ಏನಾದರೂ ಅಂದುಕೊಂಡು ಬಿಟ್ಟರೆ ಎಂಬ ಭಯ ಪುನೀತ್ ಅವರನ್ನು ಕಾಡದಂತೂ ಸುಳ್ಳಲ್ಲ. ಆದರೆ, ಹಾಗಾಗಲೇ ಇಲ್ಲ. ರಾಜ್‌ಕುಮಾರ್ ಒಪ್ಪಿಕೊಂಡರು.
ನನ್ನ ತಾಯಿ ಪಾರ್ವತಮ್ಮ ಬಳಿ ನನ್ನ ಪ್ರೀತಿ ವಿಚಾರ ಹೇಳಿಕೊಂಡೆ. ಅವರು ಖುಷಿ ಆದರು. ತಂದೆಗೆ ತಿಳಿಸುವಂತೆ ನನಗೆ ಸೂಚಿಸಿದರು. ಅವರು ನಕ್ಕರು. ಮದುವೆಗೆ ಒಪ್ಪಿಗೆ ಸೂಚಿದರು. ತಂದೆ ಬರ್ತ್ಡೇ ದಿನ ಅಶ್ವಿನಿ ಬಳಿ ಕಾಲ್ ಮಾಡಿಸಿ ವಿಶ್ ಮಾಡಿಸಿದ್ದೆ. ಜನರೇಶನ್ ಗ್ಯಾಪ್ ಅನ್ನೋದಲ್ಲ ಏನೂ ಇರಲಿಲ್ಲ’ ಎಂದಿದ್ದರು ಪುನೀತ್.ರಾಜ್ಕುಮಾರ್ ಅವರು ಮಕ್ಕಳ ಜೊತೆ ಮಕ್ಕಳಾಗಿ ಬೆರೆಯುತ್ತಿದ್ದರು. ಹಿರಿಯರ ಬಳಿ ಅವರ ರೀತಿಯೇ ಇರುತ್ತಿದ್ದರು. ರಾಜ್‌ಕುಮಾರ್ ಒಪ್ಪಿಗೆ ಬಳಿಕ ಪುನೀತ್ ಹಾಗೂ ಅಶ್ವಿನಿ ಮದುವೆ ಅದ್ದೂರಿಯಾಗಿ ನಡೆಯಿತು.


