ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಾಯಕತ್ವಕ್ಕೆ ಮತ್ತಷ್ಟು ಶಕ್ತಿ

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಉಪಚುನಾವಣೆ ಫಲಿತಾಂಶಗಳು ದೊಡ್ಡ ನೈತಿಕ ಶಕ್ತಿ ನೀಡಿದೆ. ಮೂರಕ್ಕೆ ಮೂರು ಸ್ಥಾನವೂ ಕಾಂಗ್ರೆಸ್ ಪಾಲಾಗಿದ್ದು, ಸರ್ಕಾರವನ್ನು ಕಟ್ಟಿಹಾಕಲು ವಿರೋಧ ಪಕ್ಷಗಳು ಬಳಸಿದ್ದ ವಕ್ಫ್ ಬೋರ್ಡ್, BPL ಕಾರ್ಡ್ಗಳ ಪರಿಷ್ಕರಣೆ, ಮುಡಾ ಹಗರಣ ವಿಷಯಗಳು ಉಪ ಚುನಾವಣೆಯಲ್ಲಿ ಪರಿಣಾಮ ಬೀರಿಲ್ಲ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ, ಎಸ್ಟಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣದ ಆರೋಪ ಎದುರಿಸುತ್ತಿರುವ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಗೆಲುವು ರಾಜಕೀಯವಾಗಿ ಶಕ್ತಿ ನೀಡಿದೆ. ಜಾರಿ ನಿರ್ದೇಶನಾಲಯ ಲೋಕಾಯುಕ್ತ ಪೊಲೀಸರು ಮತ್ತು ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಚುನಾವಣೆ ಗೆಲುವು ಕೊಟ್ಟಿದೆ.
ಉಪಚುನಾವಣೆ ಗೆಲುವು ಪಕ್ಷದೊಳಗೆ ತಮ್ಮ ಸ್ಥಾನವನ್ನು ಪ್ರತಿಪಾದಿಸಲು ಸಿಎಂ ಅವರಿಗೆ ಸಹಾಯ ಮಾಡುತ್ತದೆ ಮತ್ತು ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳಿಗೆ ಬಲವಾದ ಸಂದೇಶವನ್ನು ರವಾನಿಸುತ್ತದೆ.
ಕರ್ನಾಟಕದ ಉಪಚುನಾವಣೆ ಗೆಲುವು ಕಾಂಗ್ರೆಸ್ ಕೇಂದ್ರ ನಾಯಕತ್ವಕ್ಕೆ ಸ್ವಲ್ಪ ಸಮಾಧಾನ ತಂದಿದೆ. ಇದು ಸಿದ್ದರಾಮಯ್ಯನವರಿಗೆ ಸಚಿವ ಸಂಪುಟ ಪುನಾರಚನೆಗೆ ಹೆಚ್ಚಿನ ಹತೋಟಿಯನ್ನು ನೀಡಬಹುದು ಎಂದು ಪಕ್ಷದ ಅನೇಕರು ಹೇಳುತ್ತಾರೆ.




