ರಾಮನಗರ : ಮೈಸೂರು ಚಲೋ ಪಾದಯಾತ್ರೆಯಲ್ಲಿ ಬಿಜೆಪಿ-ಜೆಡಿಎಸ್​ ನಾಯಕರ ಒಳಗೆ ಮುನಿಸು ಬಹಿರಂಗ. ಚನ್ನಪಟ್ಟಣದ ಟಿಕೆಟ್​ ಆಕಾಂಕ್ಷಿ ಯೋಗೀಶ್ವರ್​ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇಡೀ ಪಾದಯಾತ್ರೆಯಲ್ಲಿ ಅವರ ಗೈರು ಹಾಜರಿ ಎದ್ದುಕಾಣುತ್ತಿತ್ತು. ಎಲ್ಲೆಲ್ಲೂ ನಿಖಿಲ್​ ಕುಮಾರಸ್ವಾಮಿ ಭಾವಚಿತ್ರವೇ . ಕುಮಾರಸ್ವಾಮಿಯವರು ಭಾಷಣ ಆರಂಭಿಸುತ್ತಿದ್ದಂತೆ ಯೋಗೀಶ್ವರ್​ ಬೆಂಬಲಿಗರು ಚನ್ನಪಟ್ಟಣದ ಟಿಕೆಟ್​ ಘೋಷಣೆ ಮಾಡಿ ಎಂದು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು ಇಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತು ಎಂದು ಹೇಳಿದರು.

ಎರಡೂ ಪಕ್ಷಗಳ ನಾಯಕರುಗಳು ದೆಹಲಿಯಲ್ಲಿ ಕುಳಿತು ಯಾರು ಅಭ್ಯರ್ಥಿಯಾಗಬೇಕೆಂಬುದನ್ನು ತೀರ್ಮಾನ ಕೈಗೊಳ್ಳುತ್ತಾರೆ. ಚನ್ನಪಟ್ಟಣದ ಕೆರೆಗಳಿಗೆ ನೀರು ಹರಿಸಿದ್ದು ನಾನು. ಆ ಸಂದರ್ಭದಲ್ಲಿ ಯೋಗೀಶ್ವರ್​ ಪ್ರಮುಖ ಪಾತ್ರ ವಹಿಸಿದ್ದರು. ಯೋಗೀಶ್ವರ್ ಅವರ ತಂದೆ ನಿಧನದಿಂದಾಗಿ ಪಾದಯಾತ್ರೆಗೆ ಗೈರು ಹಾಜರಾಗಿದ್ದು ಕೆಲವೊತ್ತು ಮಾತ್ರ ಪಾದಯಾತ್ರೆಯಲ್ಲಿ ಹಾಜರಾಗಿ ಮಾಯವಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಮೈತ್ರಿ ಅಭ್ಯರ್ಥಿಯಾಗುವ ನಿರೀಕ್ಷೆಯಿತ್ತು, ಆದರೆ ಅದಕ್ಕೆ ಪೂರಕವಾಗುವ ವಾತಾವರಣವೂ ಇತ್ತು. ಆದರೆ ರಾಜಕೀಯ ಕಾರಣದಿಂದಾಗಿ ಅಪಸ್ವರ ಕೇಳಿಬರುತ್ತಿದೆ. ಈ ಕ್ಷೇತ್ರದಿಂದ ಟಿಕೆಟ್ ಪಡೆಯುವುದನ್ನು ನನ್ನ ಹಿತೈಷಿಗಳಿಗೆ ಬಿಟ್ಟಿದ್ದೇನೆ. ನೀವು ಎಲ್ಲೇ ಹೋದರೂ ನಿಮ್ಮ ಜೊತೆ ನಾವಿರುತ್ತೇವೆಂದು ಜನ ಹೇಳುತ್ತಿದ್ದಾರೆ. ಆಗಷ್ಟ್ 11ರಂದು ‘ನಮ್ಮ ಶಾಸಕ ನಮ್ಮ ಹಕ್ಕು’ಎಂಬ ಸ್ವಾಭಿಮಾನಿ ಸಮಾವೇಶವನ್ನು ನಡೆಸುತ್ತಿದ್ದೇವೆ. ಈ ಸಮಾವೇಶದಲ್ಲಿ ಅಂತಿಮ ನಿರ್ಧಾರವಾಗಲಿದೆಯೆಂದು ಯೋಗೀಶ್ವರ್​ ತಿಳಿಸಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights
Did you find this content engaging?