Wednesday, April 30, 2025
34.5 C
Bengaluru
LIVE
ಮನೆಜಿಲ್ಲೆಪ್ರಧಾನಮಂತ್ರಿಗೆ ಮಾಧ್ಯಮದ ಎದುರು ಬಂದು ನಿಲ್ಲುವ ತಾಕತ್ತಿಲ್ಲ - ಹೆಚ್,ವಿಶ್ವನಾಥ್

ಪ್ರಧಾನಮಂತ್ರಿಗೆ ಮಾಧ್ಯಮದ ಎದುರು ಬಂದು ನಿಲ್ಲುವ ತಾಕತ್ತಿಲ್ಲ – ಹೆಚ್,ವಿಶ್ವನಾಥ್

ಮೈಸೂರು : ಪ್ರಧಾನಮಂತ್ರಿಗೆ ಮಾಧ್ಯಮದ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ. ಇಡೀ ಜಗತ್ತಿನ‌ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತನ್ನ,ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ದ್ರೋಹ ಮಾಡಿದಂತೆ ಎಂದು ಎಂಎಲ್ ಸಿ ಹೆಚ್,ವಿಶ್ವನಾಥ್ ಪ್ರಧಾನಮಂತ್ರಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂಥಾ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡೋದೆ ಬೇಡ ಅಂದರೆ ಹೇಗೆ.? ಇದು ನಮ್ಮ‌ ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. 141 ಜನರ ಅಮಾನತನ್ನ ವಾಪಸ್ ಪಡೆಯಬೇಕು. ಆರೋಗ್ಯಕರ ವಾತಾವರಣದಲ್ಲಿ ಚರ್ಚೆಗಳ ನಡೆಯಬೇಕು. ಭಾರತ ಸರ್ಕಾರವನ್ನ ನಾನು ಒತ್ತಾಯ ಮಾಡುತ್ತಿದ್ದೇನೆ. ಈ ಕೂಡಲೇ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದರು.

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳ 141 ಸಂಸದರನ್ನ ಅಮಾನತುಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಪ್ರಶ್ನೆ ಮಾಡಿದವರನ್ನೇ ಅಮಾನತು ಮಾಡುತ್ತಿದ್ದಾರೆ. ಮೂರು ಸುತ್ತಿನ ಬೇಹುಗಾರಿಕೆ ಭೇದಿಸಿ ಒಳ ಬಂದಿದ್ದಾರೆ ಅಂದರೆ ಅದರ ಹಿಂದೆ ಯಾರಿದ್ದಾರೆ.? ಅದನ್ನ ಕೇಳಲು ಹೋದರೆ ಅಮಾನತು ಮಾಡಿದ್ದಾರೆ. ಹಾಗಾದರೇ ಸಂಸತ್ ಇರೋದು ಯಾಕೇ.? ಸಂಸತ್ ಚರ್ಚೆ ಮಾಡಲಿಕ್ಕೆ ಇರುವ ಒಂದು ವೇದಿಕೆ. ಪ್ರತಿಪಕ್ಷ ಇರುವುದೇ ಪ್ರಶ್ನೆ ಮಾಡಲು. ಆಡಳಿತ ಪಕ್ಷ ತಕ್ಕ‌ ಉತ್ತರ ಕೊಡುವ ಸಾಮರ್ಥ್ಯ ಇರಬೇಕು ಎಂದರು.

ಸಂಸತ್ತಿನ ವ್ಯವಹಾರ ಮಂತ್ರಿಗಳಿಗೆ ಯಾಕೆ ಇದು ಅರ್ಥ ಆಗಲಿಲ್ಲ. 141 ಸಂಸದರನ್ನು ಅಮಾನತು ಮಾಡಿದ್ದು ಸಂಸತ್ತಿಗೆ ಮಾಡಿದ ದೊಡ್ಡ ದ್ರೋಹ ಈ ರೀತಿ ಎಂದೂ ಆಗಿರಲಿಲ್ಲಾ ಎಂದು ವಿಶ್ವನಾಥ್ ಕಿಡಿಕಾರಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments