ಧಾರವಾಡ: ನಗರದ ಶಹರ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಠಾಣೆ ವ್ಯಾಪ್ತಿಯ ಮದಿಹಾಳದ ಗಾಯಕ್ವಾಡ ಕಲ್ಯಾಣ ಮಂಟಪದಲ್ಲಿ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮದಿಹಾಳದ ನಾಗರಿಕರು, ಗುರು ಹಿರಿಯರು ಭಾಗಿಯಾಗಿದ್ದು, ಅಪರಾಧ ಕೃತ್ಯಗಳು ನಡೆದಾಗ ಯಾವ ರೀತಿಯ ಎಚ್ಚರಿಕೆ ಇರಬೇಕು ಎಂಬವುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಇನ್ನೂ ಮನೆಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಧಾರವಾಡ ಎಸಿಪಿ ಪ್ರಶಾಂತ ಸಿದ್ಧನಗೌಡರ ಉದ್ಘಾಟನೆ ಮಾಡಿದ್ರು.
ಬಳಿಕ ಮಾತನಾಡಿದ ಅವರು ಶಾಂತಿ ಸುವ್ಯವಸ್ಥೆ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ತುಂಬಾ ಅಗತ್ಯ, ಪೊಲೀಸ್ ಇಲಾಖೆಯ ಶ್ರಮದಷ್ಟೇ ಜನರ ಸಹಕಾರ ತುಂಬಾ ಮುಖ್ಯವಾಗುತ್ತದೆ. ಪೊಲೀಸರು ಇರುವುದು ಕೇವಲ ಕೇಸ್ ಹಾಕುವುದಕ್ಕೆ ಅಲ್ಲ ಸಮಾಜದ ಶಾಂತಿ ಕಾಪಾಡುವುದಕ್ಕೆ. ಜನರು ತಮ್ಮಗೆ ಅಪರಾಧ ಕೃತ್ಯಗಳ ಕಂಡು ಬಂದಲ್ಲಿ 112 ಸಹಾಯವಾಣಿಗೆ ಮಾಹಿತಿ ನೀಡಬೇಕು.
ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಡುಕೊಂಡು ದ್ವೇಷದಿಂದ ದೂರ ಇರಬೇಕು. ಸ್ಥಳೀಯ ಹಿರಿಯರ ಮಾತಿಗೆ ಗೌರವ ಕೊಡಬೇಕು. ಪೊಲೀಸ್ ಇಲಾಖೆ ಜನ ಸ್ನೇಹಿ ಇಲಾಖೆ ಎಲ್ಲರೂ ಶಾಂತಿ ಸುವ್ಯವಸ್ಥೆ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.


