ವಿಜಯನಗರ: KSRTC ಬಸ್ ಚಾಲಕನ ಮೇಲೆ ಕಾನ್ಸ್‌ಟೇಬಲ್ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಜಾಪುರ ಗ್ರಾಮದ ಬಳಿ ನಡೆದಿದೆ.
ಓವರ್ ಟೇಕ್ ಮಾಡಿದ್ದೀಯಾ ಎಂದು ಹೇಳಿ ಬಸ್ ಅಡ್ಡಗಟ್ಟಿ ಕಾನ್ಸ್‌ಟೇಬಲ್ ಬಸ್ ಒಳಗಡೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ. ತಪ್ಪಾಗಿದೆ ಸರ್ ಬಿಡಿ ಎಂದ್ರೂ ಕೇಳದೆ ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ ಹಲ್ಲೆ ಮಾಡಿದ್ದಾನೆ. ಪ್ರಯಾಣಿಕರು ಬಿಡಿ ಸರ್ ಹೊಡಿಬೇಡಿ ಎಂದು ಹೇಳಿದ್ರೂ ಬಿಡದ ಕಾನ್ಸ್‌ಟೇಬಲ್ ಹೆಲ್ಮೆಟ್ ನಿಂದಲೂ ಹಲ್ಲೆ ಮಾಡಿದ್ದಾನೆ. ರಾಮಲಿಂಗಪ್ಪ ಹಲ್ಲೆಗೆ ಒಳಗಾಗಿರುವ ಸಾರಿಗೆ ಬಸ್ ಡ್ರೈವರ್ ಆಗಿದ್ದಾನೆ. ಈ ಘಟನೆಯ ವಿಡಿಯೋ ದೃಶ್ಯಗಳು ಸ್ಥಳೀಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇನ್ನು ಘಟನೆ ಸಂಬಂಧ ಇಬ್ಬರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದ ಪೊಲೀಸ್ ಕಾನ್ಸ್‌ಟೇಬಲ್ ಮಂಜುನಾಥ ವಿರುದ್ದ ರಾಮಲಿಂಗಪ್ಪ ಪ್ರಕರಣ ದಾಖಲಿಸಿದ್ದಾರೆ. ಇತ್ತ ಅಜಾಗರೂಕತೆಯಲ್ಲಿ ಚಾಲನೆ ಮಾಡಿದ ಚಾಲಕ ರಾಮಲಿಂಗಪ್ಪ ಹಾಗೂ ನಿರ್ವಾಹಕಿ ಆಶಾ ವಿರುದ್ಧ ಕಾನ್ಸ್‌ಟೇಬಲ್ ಮಂಜುನಾಥ ಕೂಡ ದೂರು ದಾಖಲಿಸಿದ್ದಾರೆ.
ಸಿಎಂ ಬಂದೋಬಸ್ತ್ ಗೆ ಅಂತಾ ರಾಯಚೂರಿಗೆ ಹೋಗಿ ವಾಪಸು ಕೂಡ್ಲಿಗಿಯ ತಮ್ಮ ಠಾಣೆಗೆ ಬಂದು ವರದಿ ಸಲ್ಲಿಸಿ. ವಾಪಸು ಕೊಟ್ಟೂರುನಲ್ಲಿದ್ದ ತಮ್ಮ ಕುಟುಂಬವನ್ನು ನೋಡಲು ಹೋಗುತ್ತಿದ್ದ ಮಂಜುನಾಥ. ಈ ವೇಳೆ ಕೊಟ್ಟೂರು ದಾಟಿ ಮಲ್ಲನಾಯಕನಹಳ್ಳಿ ಕ್ರಾಸ್ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದು, ಹಿಂದುಗಡೆಯಿಂದ ಬಂದ ಬಸ್ ಚಾಲಕ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕ್ ನ ಬಲಬದಿ ಹ್ಯಾಂಡಲ್ ಗೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದೆ ಚಾಲನೆ ಮಾಡಿದ್ದಾನೆಂದು ದೂರು ದಾಖಲಿಸಿದ್ದಾರೆ.
ಅಷ್ಟೇ ಅಲ್ಲದೇ ಬಸ್ ನಲ್ಲಿದ್ದ ಮಹಿಳಾ ಕಂಡಕ್ಟರ್ ಅಪಘಾತ ನೋಡಿದ್ರು ಕೂಡಾ ವಿಜಲ್ ಹಾಕಿ ಬಸ್ ನಿಲ್ಲಿಸದ ನಿರ್ಲಕ್ಷ ವಹಿಸಿದ್ದಾರೆ. ಬೈಕ್ ನಿಂದ ಬಿದ್ದು ಬಲುಗಾಲಿಗೆ ಗಾಯಿವಾಗಿದ್ದು, ಬಸ್ ನಿಲ್ಲಿಸದ ಚಾಲಕ ಮತ್ತು ನಿರ್ವಾಹಕ ನಿರ್ಲಕ್ಷ ತೋರಿದ್ದು ಚಾಲಕ ಮತ್ತು ನಿರ್ವಾಹಕ ವಿರುದ್ದ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ದಾಖಲು ಮಾಡಿದ್ದಾರೆ.
ಇನ್ನು ಪೊಲೀಸ್ ನ ವಿರುದ್ದ ಚಾಲಕ ಕೂಡ ಕೌಂಟರ್ ಕಂಪ್ಲೇಂಟ್ ದಾಖಲು ಮಾಡಿದ್ದಾರೆ. ಬೆಳ್ಳಗೆ ಹರಿಹರಿದಿಂದ ಬಳ್ಳಾರಿಗೆ ಹೋಗುತ್ತಿದ್ದ ವೇಳೆ ಕೊಟ್ಟೂರು ದಾಟಿ ಮಲ್ಲನಾಯಕನಹಳ್ಳಿ ಕ್ರಾಸ್ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದು ವೇಳೆ ಬೈಕ್ ನಲ್ಲಿದ್ದ ಪೊಲೀಸರು ಓವರ್ ಟೇಕ್ ಮಾಡಿ ಹೋದಾಗ ಎದುರಿಗೆ ಕಾರವೊಂದು ಬಂದಿದ್ದರಿಂದ ತಮ್ಮ ಬಸ್ ಬೈಕ್ ಗೆ ಹ್ಯಾಂಡಲ್ ಗೆ ಟಚ್ ಆಗಿದೆ.
ಬಸ್ ಮಿರರ್ ನಲ್ಲಿ ಬೈಕ್ ಕಾಣದೇ ಇದ್ದ ಕಾರಣ ಬಸ್ ನಿಲ್ಲಿಸದೇ ಚಾಲನೆ ಮಾಡಿದ್ದೇ.. ಕೂಡ್ಲಿಗಿ ಠಾಣಾ ಪೊಲೀಸ್ ಮಂಜುನಾಥ ಬಸ್ ನಿಲ್ಲಿಸಿ ಅವಾಚ್ಯ ಪದಗಳಿಂದ ನಿಂದನೇ ಮಾಡಿದ್ದಲ್ಲದೇ ಹಲ್ಲೆಗೆ ಮುಂದಾಗಿದ್ದು ತಾನು ಡೋರ್ ಹಾಕಿಕೊಂಡೆ ಬಳಿಕ ಬಸ್ ಒಳಗಡೆ ಬಂದು ತಮ್ಮ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ತಲೆ, ಮುಖ, ಮೈಮೇಲೆ ಹಲ್ಲೆ ಮಾಡಿದ್ದ, ಅಲ್ಲದೇ ತನ್ನ ಬಳಿ ಇದ್ದ ಹೆಲ್ಮೆಟ್ ನಿಂದ ತಲೆಗೆ ಹಲ್ಲೆ ಮಾಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪೊಲೀಸ್ ಮೇಲೆ ಕ್ರಮ ಕೈಗೊಳ್ಳಿ ಅಂತಾ ಚಾಲಕ ದೂರ ದಾಖಲಿಸಿದ್ದಾನೆ.


