ಜಿಲ್ಲೆರಾಜ್ಯಸುದ್ದಿ

ಹೊಸ ವರ್ಷಾಚರಣೆಗೆ ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್‌ಗೆ ಪೊಲೀಸ್‌ ಗೈಡ್‌ಲೈನ್ಸ್‌ ಬಿಡುಗಡೆ

ಬೆಂಗಳೂರು: ಈ ಬಾರಿ ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಸಜ್ಜಾಗಿದ್ದು, ಪೊಲೀಸ್​ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಸುರಕ್ಷತೆಯ ದೃಷ್ಠಿಯಿಂದ ಸರ್ಕಾರ, ಪೊಲೀಸ್​​ ಇಲಾಖೆ ಹಾಗೂ ನ್ಯಾಷನಲ್​​​ ರೆಸ್ಟೋರೆಂಟ್​​​ ಅಸೋಸಿಯೆಷನ್​​ ಆಫ್​​​​ ಇಂಡಿಯಾ ಬೆಂಗಳೂರಿನ ಪಬ್​​, ಬಾರ್​​​​, ಕ್ಲಬ್​​​​​​​​​​​​​​​​​​​ಗಳಿಗೆ 19 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ..

ಗೋವಾದ ನೈಟ್ ಕ್ಲಬ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 20 ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆಯ ನಂತರ ಇದೀಗ ಸುರಕ್ಷತೆಯ ದೃಷ್ಠಿಯಿಂದ

  • ಹೊಸ ವರ್ಷಕ್ಕೆ ಹೊಸ ರೂಲ್ಸ್‌
  • ಕಾರ್ಯಕ್ರಮಗಳಿಗೆ ಸಂಬಂಧ ಪಟ್ಟ ಇಲಾಖೆಗಳಿಂದ ಅನುಮತಿ ಕಡ್ಡಾಯ ಹಾಗೂ ನಿಯಮ ಪಾಲಿಸಬೇಕು.
  • ಹೊಸ ವರ್ಷಾಚರಣೆ ಸಂಬಂಧ ನಿಗಧಿತ ಸಮಯವನ್ನ ಪಾಲಿಸಬೇಕು.
  • ಕಡ್ಡಾಯವಾಗಿ ಧ್ವನಿವರ್ಧಕ ಪರವಾನಗಿ ಪಡೆದುಕೊಂಡ ನಂತರ ನಿಗದಿತ ಶಬ್ಧ ಮಿತಿ ಇರಬೇಕು.
  • ಸ್ಥಳಾವಕಾಶಕ್ಕೆ ತಕ್ಕಂತೆ ಟಿಕೆಟ್/ಪಾಸ್‌ಗಳನ್ನು ವಿತರಿಸಬೇಕು. ಹಾಗೂ ನೆಲಮಹಡಿ, ಪಾರ್ಕಿಂಗ್ ಸ್ಥಳಗಳು,
  • ಟೆರೆಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.
  • ಕಾರ್ಯಕ್ರಮದ ಸ್ಥಳಗಳಲ್ಲಿ ಸ್ಕ್ರೀನ್‌ಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಸ್ಕ್ರೀನಿಂಗ್ ಮಾಡಬಾರದು.
  •  ಕಾರ್ಯಕ್ರಮಕ್ಕೆ ಬರುವವರ ತಪಾಸಣೆ ನಡೆಸಿ ಸಂಶಯಾಸ್ಪದ ವಸ್ತು/ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುಬೇಕು.
  •  ಅಗ್ನಿ ನಂದಿಸುವ ವಸ್ತುಗಳನ್ನ ಅಳವಡಿಸಿಕೊಳ್ಳಬೇಕು, ನಿರ್ಗಮನ ದ್ವಾರಗಳು ದೊಡ್ಡದಾಗಿರಬೇಕು.
  •  ಕಾರ್ಯಕ್ರಮದ ಪ್ರತಿ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ 30 ದಿನಗಳವರೆಗೆ ಸ್ಟೋರೆಜ್ ಮಾಡಬೇಕು.
  • ಮಾದಕ ವಸ್ತುಗಳ ಬಳಕೆ‌ ಕಂಡು ಬಂದರೆ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರೇ ದಾಳಿ ನಡೆಸಿದಾಗ ಸಿಕ್ಕಿಬಿದ್ದರೆ ಕಾರ್ಯಕ್ರಮದ ಕಟ್ಟಡದ ಮಾಲೀಕರು/ಮ್ಯಾನೇಜರ್‌ ವಿರುದ್ಧ ಕೇಸ್.
  • ಸಾರ್ವಜನಿಕರ ವಾಹನಗಳಿಗೆ ತಮ್ಮ ಪಾರ್ಕಿಂಗ್ ಸ್ಥಳದಲ್ಲಿಯೇ ವ್ಯವಸ್ಥೆ ಮಾಡಿಸಬೇಕು.
  • ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿಗಳು, ಡಿಜೆಗಳು, ನಟ ನಟಿಯರನ್ನ
  • ಆಹ್ವಾನಿಸಿದ್ದಲ್ಲಿ ಅವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು.
  •  ಪಾರ್ಕಿಂಗ್ ಸ್ಥಳ ಮತ್ತು ಮಹಿಳೆಯರಿರುವ ಸ್ಥಳಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಬೇಕು.
  •  ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಬೌನ್ಸರ್‌ಗಳನ್ನು ನಿಯೋಜಿಸಿ ಕೊಳ್ಳುವ ಏಜೆನ್ಸಿಗಳು ‘PSARA’ ದಲ್ಲಿ ನೊಂದಣಿ ಮಾಡಬೇಕು.
  •  ಪಾರ್ಟಿ ವೇಳೆ ಇರುವ ಕೆಲಸಗಾರರ ಮಾಹಿತಿಯನ್ನ ಧೃಢೀಕೃತ ಐ.ಡಿ ಕಾರ್ಡ್‌ನೊಂದಿಗೆ ನೀಡಬೇಕು.
  •  ಲೈಸೆನ್ಸ್ ಇಲ್ಲದ ಔಟ್ ಡೋರ್ ಸ್ಥಳಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶವಿಲ್ಲ.
  •  ಹೋಟೆಲ್‌ಗಳ ರೂಮ್‌ಗಳಲ್ಲಿ ಗುಂಪು ಸೇರಿ ನಿಯಮ ಬಾಹಿರವಾಗಿ ಖಾಸಗಿ ಪಾರ್ಟಿ ನಡೆಸಲು ಅವಕಾಶ ನೀಡಬಾರದು.
  •  ಕಾರ್ಯಕ್ರಮದ ಸ್ಥಳದಲ್ಲಿ ಗಲಾಟೆ ನಡೆದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.
  •  ಕಾರ್ಯಕ್ರಮದ ವೇಳೆ ಪಟಾಕಿ ಸಿಡಿಸುವುದನ್ನ ಸಂಪೂರ್ಣವಾಗಿ ನಿಷೇಧಿಸಿದೆ.
  •  ಯಾವುದೇ ಅಹಿತಕರವಾದ ಘಟನೆಗಳು ನಡೆಯದಂತೆ ಕ್ರಮಗಳನ್ನ ಕೈಗೊಳ್ಳಬೇಕು. ಒಂದು ವೇಳೆ ಮಾರ್ಗಸೂಚಿ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button