Tuesday, January 27, 2026
26.7 C
Bengaluru
Google search engine
LIVE
ಮನೆದೇಶ/ವಿದೇಶಸಂಘದ ಕಚೇರಿಗೆ ಪ್ರಧಾನಿ ಮೋದಿ ಭೇಟಿ; RSS ಸಂಸ್ಥಾಪಕರಿಗೆ ನಮನ

ಸಂಘದ ಕಚೇರಿಗೆ ಪ್ರಧಾನಿ ಮೋದಿ ಭೇಟಿ; RSS ಸಂಸ್ಥಾಪಕರಿಗೆ ನಮನ

ನಾಗ್ಪುರ: ಇಂದು ದೇಶಾದ್ಯಂತ ಯುಗಾದಿ ಹಬ್ಬ, ಅಲ್ಲದೇ ಆರ್​ಎಸ್​ಎಸ್​ ಆದ್ಯ ಸರಸಂಘಚಾಲಕ ಕೇಶವ್ ಬಲಿರಾಮ್ ಹೆಡಗೆವಾರ್ ಅವರ ಜನ್ಮದಿನ,  ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಗ್ಪುರದಲ್ಲಿರುವ ಸಂಘದ ಕಚೇರಿಗೆ ಭೇಟಿ ನೀಡಿದರು.

ಆರ್​ಎಸ್​ಎಸ್​ ಸ್ಥಾಪನೆಯಾಗಿ ಭರ್ತಿ 100 ವರ್ಷಗಳನ್ನು ಪೂರೈಸಿದೆ. ಮತ್ತು ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ನಾಗ್ಪುರದ ರೇಶಿಮ್​ ಭಾಗ್​ನಲ್ಲಿರುವ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಭೇಟಿ ನೀಡದ್ದಾರೆ.

ಈ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ್​ ಹೆಗಡೇವಾರ್​ ಹಾಗೂ ಎರಡನೇ ಸರಸಂಘಚಾಲಕ್​ ಗುರೂಜಿ ಗೋಲ್ವಾಲ್ಕರ್​ ಅವರ ಸ್ಮಾರಕಗಳಿಗೆ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಗ್ಪುರದವರೇ ಆದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು

ಭೇಟಿ ಬಳಿಕ ಅಲ್ಲಿದ್ದ ಸಂದೇಶ ಪುಸ್ತಕದಲ್ಲಿ, “ಈ ಸ್ಮಾರಕವನ್ನು ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ ಮತ್ತು ಸಂಘಟನೆಯ ಮೌಲ್ಯಗಳಿಗೆ ಸಮರ್ಪಿಸಲಾಗಿದೆ” ಎಂದು ಹಿಂದಿಯಲ್ಲಿ ಮೋದಿ ಅವರು ಬರೆದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments