Tuesday, January 27, 2026
24 C
Bengaluru
Google search engine
LIVE
ಮನೆದೇಶ/ವಿದೇಶRJD ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ.. ಬಿಹಾರ ಮಹಿಳೆಯರಿಗೆ ಪ್ರಧಾನಿ ಮೋದಿ ಕರೆ

RJD ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ.. ಬಿಹಾರ ಮಹಿಳೆಯರಿಗೆ ಪ್ರಧಾನಿ ಮೋದಿ ಕರೆ

ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಒಬ್ಬ ಮಹಿಳೆ ಪ್ರಗತಿ ಸಾಧಿಸಿದಾಗ, ಇಡೀ ಸಮಾಜವು ಮುಂದುವರಿಯುತ್ತದೆ. ಸರ್ಕಾರ ಮಹಿಳೆಯರನ್ನು ಕೇಂದ್ರದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಿದಾಗ, ಅದರ ಪ್ರಯೋಜನಗಳು ಸಮಾಜದ ಇತರ ಭಾಗಗಳಿಗೂ ವಿಸ್ತರಿಸುತ್ತವೆ. ಉಜ್ವಲ ಯೋಜನೆಯ ಪರಿವರ್ತನಾತ್ಮಕ ಪರಿಣಾಮವನ್ನು ಈಗ ಪ್ರಪಂಚದಾದ್ಯಂತ ಗುರುತಿಸಲಾಗುತ್ತಿದೆ ಎಂದು ಹೇಳಿದರು.

ಪ್ರತಿಯೊಬ್ಬ ಮಹಿಳೆಯನ್ನು ಸಬಲೀಕರಣಗೊಳಿಸಲು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಪ್ರಾರಂಭಿಸಲಾಗಿದೆ. ಇದು ಈಗಾಗಲೇ ಈ ಉಪಕ್ರಮದಲ್ಲಿ ದಾಖಲಾಗಿರುವ ಸುಮಾರು 75 ಲಕ್ಷ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತಿದೆ. ಈ ಮಹಿಳೆಯರಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಏಕಕಾಲದಲ್ಲಿ 10,000 ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಬಿಹಾರದ ಮಹಿಳೆಯರಿಗೆ ಈಗ ಇಬ್ಬರು ಸಹೋದರರು, ಒಬ್ಬರು ನಿತೀಶ್ ಕುಮಾರ್, ಮತ್ತೊಬ್ಬರು ಮೋದಿ ಇದ್ದಾರೆ. ಈ ಇಬ್ಬರೂ ಸುಧಾರಣೆಗಾಗಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೋದಿ ಹೇಳಿದರು.ಆರ್‌ಜೆಡಿ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರಕ್ಕೆ ಮರಳಲು ಯಾವತ್ತೂ ಅವಕಾಶ ನೀಡಬಾರದು. ಏಕೆಂದರೆ ಅವರ ಹಿಂದಿನ ಸರ್ಕಾರ ವಿಶೇಷವಾಗಿ ಮಹಿಳೆಯರಿಗೆ ಅಪಾರ ಕಷ್ಟಗಳನ್ನು ಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಿಹಾರದ ಮಹಿಳೆಯರಿಗೆ ಹೇಳಿದರು.

ಪ್ರತಿ ಫಲಾನುಭವಿಯು ನೇರ ವರ್ಗಾವಣೆಯ ಮೂಲಕ 10,000 ರೂ.ಗಳ ಆರಂಭಿಕ ಅನುದಾನವನ್ನು ಪಡೆಯುತ್ತಾರೆ, ನಂತರದ ಹಂತಗಳಲ್ಲಿ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ಬೆಂಬಲ ನೀಡು ಸಾಧ್ಯತೆಯಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments