Freedom TV

ಪ್ರಧಾನಿ ಮೋದಿಯಿಂದ ಬಿಗ್​ ಅನೌನ್ಸ್​​ಮೆಂಟ್!

ಅಯೋಧ್ಯ : ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಪ್ರಧಾನಿ ಮೋದಿ ಬೆಳಕಿನ ಉಡುಗೊರೆ ನೀಡಿದ್ದಾರೆ.1 ಕೋಟಿ ಮನೆಗಳಿಗೆ ಸೌರಶಕ್ತಿಯನ್ನು ಒದಗಿಸಲು ನಮೋ ಮುಂದಾಗಿದ್ದಾರೆ. ‘ಸೂರ್ಯೋದಯ ಯೋಜನೆ’ಯಲ್ಲಿ 1ಕೋಟಿ ಮನೆಗಳಿಗೆ ರೂಫ್​ಟಾಪ್​ ಸೋಲಾರ್​ ನೀಡುವುದಾಗಿ ಪ್ರಧಾನಿ ಮೋದಿ ತಿಳಿಸಿದರು.ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯ ಮುಗಿಸಿ ದೆಹಲಿಗೆ ವಾಪಸಾದ ತಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಪ್ರಕಟಿಸಿದ್ದಾರೆ. 1 ಕೋಟಿ ಮನೆಗಳಿಗೆ ಸೋಲಾರ್ ಅಳವಡಿಸುವ ಗುರಿಯನ್ನ ಹೊಂದಿರೋದಾಗಿ ತಿಳಿಸಿದರು…

ದೇಶದ ಬಡವರು, ಮಧ್ಯಮ ವರ್ಗಗಳ ಸುಮಾರು 1 ಕೋಟಿ ಮನೆಗಳನ್ನ, ಸೌರಶಕ್ತಿಯಿಂದ ಬೆಳಗಲಿವೆ. ಸೂರ್ಯವಂಶದ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಬೆನ್ನಲ್ಲೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಎಂದು ಮೋದಿ ಹೆಸರಿಟ್ಟಿದ್ದಾರೆ. ಅಲ್ಲದೆ, ದೇಶದ ಅನೇಕ ಮನೆಗಳ ವಿದ್ಯುತ್ ದರವನ್ನ ಗಣನೀಯವಾಗಿ ಇಳಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button