Wednesday, February 11, 2026
19.8 C
Bengaluru
Google search engine
LIVE
ಮನೆ#Exclusive NewsTop Newsಪ್ರಧಾನಿ ಮೇಲೆ ಹಲ್ಲೆಗೆ ಸಂಚು? ಕಿರೆನ್ ರಿಜಿಜು ಬಿಡುಗಡೆ ಮಾಡಿದ ವೀಡಿಯೋದಲ್ಲಿ ಏನಿದೆ?

ಪ್ರಧಾನಿ ಮೇಲೆ ಹಲ್ಲೆಗೆ ಸಂಚು? ಕಿರೆನ್ ರಿಜಿಜು ಬಿಡುಗಡೆ ಮಾಡಿದ ವೀಡಿಯೋದಲ್ಲಿ ಏನಿದೆ?

ಲೋಕಸಭೆಯಲ್ಲಿ ಫೆಬ್ರವರಿ 4ರಂದು ನಡೆದ ಬೆಳವಣಿಗೆಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದೈಹಿಕ ಹಲ್ಲೆಗೆ ಸಂಚು ನಡೆಸಲಾಗಿತ್ತು ಎಂಬ ಗಂಭೀರ ಆರೋಪ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪ್ರಧಾನಿಯವರು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಬೇಕಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರು ವ್ಯವಸ್ಥಿತವಾಗಿ ಈ ಹಲ್ಲೆಯ ಯೋಜನೆ ರೂಪಿಸಿದ್ದರು ಎಂದು ಕೇಂದ್ರ ಸಚಿವ ಕಿರೆನ್ ರಿಜಿಜು ವೀಡಿಯೋ ದಾಖಲೆಗಳ ಸಮೇತ ಆರೋಪಿಸಿದ್ದಾರೆ.

ಮಹಿಳಾ ಸಂಸದರನ್ನು ಪ್ರಧಾನಿಯವರ ಆಸನದ ಸುತ್ತ ನಿಲ್ಲಿಸಿ ಈ ಕೃತ್ಯವನ್ನು ಮರೆಮಾಚಲು ಉದ್ದೇಶಿಸಲಾಗಿತ್ತು ಎಂಬುದು ಬಿಜೆಪಿ ನಾಯಕರ ಪ್ರಮುಖ ದೂರಾಗಿದೆ. ಸಚಿವರು ಹಂಚಿಕೊಂಡಿರುವ ವೀಡಿಯೋದಲ್ಲಿ ವಿರೋಧ ಪಕ್ಷದ ಮಹಿಳಾ ಸಂಸದರು ಬ್ಯಾನರ್ ಹಿಡಿದು ಪ್ರಧಾನಿಯವರ ಆಸನದತ್ತ ಧಾವಿಸಲು ಯತ್ನಿಸುವುದು ಮತ್ತು ಬಿಜೆಪಿ ಸಂಸದರು ಅವರನ್ನು ತಡೆಯಲು ಮುಂದಾಗುವ ದೃಶ್ಯಗಳು ಕಂಡುಬಂದಿವೆ.

ಸದನದ ಘನತೆಯನ್ನು ಕಾಪಾಡುವ ದೃಷ್ಟಿಯಿಂದ ಬಿಜೆಪಿ ಸಂಸದರನ್ನು ಸಂಯಮದಿಂದ ಇರುವಂತೆ ಸೂಚಿಸಲಾಗಿತ್ತು ಎಂದು ಕಿರೆನ್ ರಿಜಿಜು ವಿವರಿಸಿದ್ದಾರೆ. ಕಾಂಗ್ರೆಸ್ ಸಂಸದರ ಈ ವರ್ತನೆಯಿಂದ ಬಿಜೆಪಿ ಮಹಿಳಾ ಸಂಸದರು ಆಕ್ರೋಶಗೊಂಡಿದ್ದು, ದೈಹಿಕ ಮುಖಾಮುಖಿಯನ್ನು ತಪ್ಪಿಸಲು ಹಿರಿಯ ನಾಯಕರು ಹರಸಾಹಸ ಪಡಬೇಕಾಯಿತು ಎಂದು ತಿಳಿಸಿದ್ದಾರೆ. ಗಲಾಟೆಯ ನಂತರ ವಿರೋಧ ಪಕ್ಷದ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಗೆ ತೆರಳಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮಹಿಳಾ ಸಂಸದರು ಈಗಾಗಲೇ ಸ್ಪೀಕರ್‌ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸದನದೊಳಗೆ ಅಹಿತಕರ ಘಟನೆ ನಡೆಯುವ ಮುನ್ಸೂಚನೆ ಇದ್ದಿದ್ದರಿಂದಲೇ ತಾವು ಪ್ರಧಾನಿಯವರಿಗೆ ಸದನಕ್ಕೆ ಬರದಂತೆ ವಿನಂತಿಸಿದ್ದಾಗಿ ಸ್ಪೀಕರ್ ಓಂ ಬಿರ್ಲಾ ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಸಂಸದರು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಈ ಸಂಘರ್ಷದಿಂದಾಗಿ ಸಂಸತ್ತಿನ ಕುರಿತು ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments