ಬೆಂಗಳೂರು: Pink WhatsApp ಬಳಸೋಕು ಮುನ್ನ ಹುಷಾರ್. ಸೈಬರ್ ಖದೀಮರು ಪಿಂಕ್ ಕಲರ್ ವಾಟ್ಸ್ಆ್ಯಪ್ ವಂಚನೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ನಗರದಲ್ಲಿ ಪೊಲೀಸರು ಕೂಡು ಅಲರ್ಟ್ ಆಗಿದ್ದಾರೆ…
ಇನ್ನು ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಬಳಸದಂತೆ ಪೊಲೀಸರು ಮನವಿ ಮಾಡಿಕೊಳ್ತಿದ್ದಾರೆ. ಟ್ವಿಟರ್ ಮೂಲಕ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಫೋಟೋ ಹಾಕಿ ಟ್ಯಾಗ್ ಮಾಡಿದ್ದು, ಈ ವಾಟ್ಸ್ಆ್ಯಪ್ ಬಳಸಿದರೆ ಮೊಬೈಲ್ ಸಂಪೂರ್ಣ ಡೇಟಾ ಹ್ಯಾಕರ್ಸ್ ಕೈಸೇರುತ್ತದೆ. ಇದರಿಂದ ಜಾಗೃತೆಯಿಂದಿರಿ ಎಂದು ತಿಳಿಸಿದ್ದಾರೆ.
ನಿಮ್ಮ ಮೊಬೈಲ್ನಲ್ಲಿರುವ ಫೋಟೋ, ಬ್ಯಾಂಕ್ ಖಾತೆಗಳ ವಿವರ, ಪಾಸ್ ವರ್ಡ್, ಕಾಂಟ್ಯಾಕ್ಟ್ಸ್ ಹಾಗೂ ಮೆಸೇಜ್ಗಳನ್ನು ಕದಿಯುತ್ತಾರೆ. ಜೊತೆಗೆ ಸಂಪೂರ್ಣ ನಿಮ್ಮ ಮೊಬೈಲ್ನ ದತ್ತಾಂಶ ಹ್ಯಾಕರ್ಸ್ ಕೈಸೇರುತ್ತದೆ ಹುಷಾರ್ ಆಗಿರಿ ಎಂದು ಎಚ್ಚರಿಸಿದ್ದಾರೆ. ಯಾರೂ ಕೂಡ ಈ ಪಿಂಕ್ ವಾಟ್ಸ್ಆ್ಯಪ್ ಯಾರೂ ಬಳಕೆ ಮಾಡಬಾರದು. ಯಾವುದೇ ರೀತಿಯ ಸೈಬರ್ ವಂಚನೆಯಾದರೆ 1930ಕ್ಕೆ ಕರೆ ಮಾಡಲು ಪೊಲೀಸರು ತಿಳಿಸಿದ್ದಾರೆ.
ಗುಲಾಬಿ ಬಣ್ಣದ ವಾಟ್ಸ್ ಆಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ.
ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಅಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ Android ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ.
ಜಾಗೃತೆಯಿಂದಿರಿ..#CyberSecurity #KSP_ಸುವರ್ಣಸಂಭ್ರಮ #GoldenJubileeOf_KSP pic.twitter.com/AgdjRLXnNf
— ಕರ್ನಾಟಕ ರಾಜ್ಯ ಪೊಲೀಸ್ Karnataka State Police (@KarnatakaCops) January 23, 2024