Top Newsವೈರಲ್ ನ್ಯೂಸ್ಸುದ್ದಿ

ನೀವು ಈ ಹಿಂದೆ ಎಂದು ನೋಡಿರದ ಅಪರೂಪದ ದೃಶ್ಯ; ಪ್ರವಾಹದ ನೀರಿನಲ್ಲಿ ಮುಳುಗಿದ ಬಾವಿ!

ಪ್ರಕೃತಿ‌ಯೇ ಬಿಡಿಸಿದ ಸುಂದರ ಚಿತ್ರ ಎನ್ನುವ ತಲೆ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಉಪ್ಪಿನಂಗಡಿಯ ಬಳಿ ದೃಶ್ಯ ಕಂಡು ಬಂದಿದೆ.

ಮಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿ ರಾಜ್ಯಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ರಾಜ್ಯದ ಪ್ರಮುಖ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಹಲವು ಜಲಾಶಯಗಳು ತುಂಬಿದ್ದರೆ ಮತ್ತೆ ಕೆಲವು ಜಲಾಶಯಗಳು ತುಂಬ ಮಟ್ಟಕ್ಕೆ ಬಂದಿದೆ.

 

ಇದರ ನಡುವೆ ನೆರೆ ನೀರಿನಲ್ಲಿ ಮುಳುಗಿದ ಬಾವಿಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉಪ್ಪಿನಂಗಡಿ ಪರಿಸರದ ತೋಟವೊಂದರಲ್ಲಿ ಈ ದೃಶ್ಯ ಕಂಡು ಬಂದಿದ್ದು, ಶುದ್ಧ ಬಾವಿ ನೀರಿನ ಸುತ್ತ ಕೆಂಪು ಮಿಶ್ರಿತ ನೆರೆ ನೀತು ನಿಂತ ದೃಶ್ಯ ಕಂಡು ಬಂದಿದೆ. ಪ್ರಕೃತಿ‌ಯೇ ಬಿಡಿಸಿದ ಸುಂದರ ಚಿತ್ರ ಎನ್ನುವ ತಲೆ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಉಪ್ಪಿನಂಗಡಿಯ ಬಳಿ ದೃಶ್ಯ ಕಂಡು ಬಂದಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button