ಬೆಂಗಳೂರು : ಪೀಣ್ಯ ಫ್ಲೈಓವರ್ ಬಂದ್ ಹಿನ್ನೆಲೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್ ಇದಾಗಿದ್ದು, ರಾತ್ರಿಯಿಂದ ಬಂದ್ ಮಾಡಲಾಗಿದೆ. ಹೀಗಾಗಿ ಫ್ಲೈಓವರ್ ಸುತ್ತಮುತ್ತಲೂ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ನಾಲ್ಕಾರು ಗಂಟೆ ಟ್ರಾಫಿಕ್ ಸಾಲಿನಲ್ಲಿ ಸವಾರರು ಸಮಯ ಕಳೆಯುವಂತಾಗಿದೆ.
ಫ್ಲೈಓವರ್ ಎಷ್ಟು ಭಾರ ಹೊರಬಲ್ಲದು ಮತ್ತು ಅದರ ಸಮಗ್ರತೆ ಪರಿಶೀಲನೆ ಮೇರೆಗೆ ಲೋಡ್ ಟೆಸ್ಟಿಂಗ್ ನಡೆಸಲಿದ್ದು, ಹೀಗಾಗಿ ಮೂರು ದಿನಗಳ ಕಾಲ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಿ, . ಲಘು ವಾಹನಗಳ ಸಂಚಾರ ನಿಲ್ಲಿಸಿ ರೋಡ್ ಟೆಸ್ಟಿಂಗ್ ಮಾಡಿ ಈ ಮಾರ್ಗ ಎಷ್ಟು ಸುರಕ್ಷಿತ ಎಂಬ ಚೆಕ್ಕಿಂಗ್ ನಡೆಸಿ . ಬಳಿಕ ಸಂಚಾರಕ್ಕೆ ಸೂಕ್ತವೇ ಎಂದು ನಿರ್ಧರಿಸಲಿದ್ದಾರೆ. ಫ್ಲೈಓವರ್ನ ಈ ಹಿಂದೆ ದುರಸ್ತಿಪಡಿಸಿದ ಪಿಲ್ಲರ್ ಬಿಟ್ಟು ಉಳಿದ ಪಿಲ್ಲರ್‌ಗಳ ಗುಣಮಟ್ಟ ಪರೀಕ್ಷೆ ನಡೆಸುವ ಅಗತ್ಯ ಇರುವುದರಿಂದ . ಇಷ್ಟು ದಿನ ಕೇವಲ ಲಘು ವಾಹನಗಳು ಸಂಚಾರ ಮಾಡ್ತಿದ್ದ ಫ್ಲೈ ಓವರ್ನಲ್ಲಿ ಘನ ವಾಹನದ ಸಂಚಾರಕ್ಕೆ ಯೋಗ್ಯವಾಗಿದೆಯಾ? ಅನ್ನೋ ಟೆಸ್ಟಿಂಗ್ ನಡೆಯುತ್ತಿದೆ. ಹೀಗಾಗಿ ನಿನ್ನೆ ರಾತ್ರಿ 11 ಗಂಟೆಯಿಂದ ಫ್ಲೈ ಓವರ್ ಬಂದ್ ಮಾಡಲಾಗಿದೆ.
2022ರಲ್ಲೂ ಪೀಣ್ಯ ಫ್ಲೈಓವರ್‌ನ ಎರಡು ಪಿಲ್ಲರ್ ಗಳ ಕೇಬಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಈಗ ಮತ್ತೆ ಲೋಡ್ ಟೆಸ್ಟಿಂಗ್ ಹಿನ್ನೆಲೆ ಫ್ಲೈ ಓವರ್ ಬಂದ್ ಮಾಡಿದ್ದಾರೆ, ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದ್ದು . ಈ ಬಗ್ಗೆ ಮಾತನಾಡಿರುವ ಸಂಚಾರ ವಿಭಾಗದ ಜಂಟಿ ಆಯುಕ್ತ ಅನುಚೇತ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಸ್ಟಿಂಗ್ ನಡೆಸಲಿದೆ. ಹೀಗಾಗಿ ವಾಹನ ಸವಾರರು ಬದಲಿ ಮಾರ್ಗದಲ್ಲಿ ಚಲಿಸಿ ಸಹಕರಿಸಬೇಕು ಎಂದಿದ್ದಾರೆ.
ಆದ್ರೆ ಸುಮಾರು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸೋ ಈ ರಸ್ತೆ ಸಹಸ್ರಾರು ವಾಹನ ಸವಾರರಿಗೆ ಸಂಕಷ್ಟ ತಂದಿರುವುದು ಸುಳ್ಳಲ್ಲ, ಅವೈಜ್ಞಾನಿಕ ನಿರ್ಮಾಣವೇ ಇದಕ್ಕೆ ನೇರ ಕಾರಣವೆಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಪದೇ ಪದೇ ಫ್ಲೈ ಓವರಿನ ಗುಣಮಟ್ಟದ ಪರೀಕ್ಷೆಯ ಹೆಸರಿನಲ್ಲಿ ವಾಹನಗಳಿಗೆ ನಿರ್ಬಂಧ ಹೇರುವುದು ನಿರ್ಮಾಣದ ಅವೈಜ್ಞಾನಿಕತೆಯನ್ನ ಸಾಬೀತು ಪಡಿಸುತ್ತದೆ ಎಂದು ಸವಾರರು ಕಿಡಿಕಾರಿದ್ದಾರೆ.
ಬದಲಿ ಮಾರ್ಗಗಳ ವಿರುದ್ಧವೂ ಆಕ್ರೋಶ ಪೀಣ್ಯ ಎಲಿವೇಟೆಡ್ ಪ್ಲೈಓವರ್ ಬಂದ್ ಹಿನ್ನೆಲೆ ತುಮಕೂರು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ನೆಲಮಂಗಲ ಕಡೆಯಿಂದ ಬರುವ ವಾಹನಗಳು ಕೆನ್ನಮೆಟಲ್ ಬಳಿ ಹೆದ್ದಾರಿ ಸರ್ವೀಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ, ಎಸ್ ಆರ್ ಎಸ್, ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದು.ನೆಲಮಂಗಲ ಕಡೆ ಸಂಚರಿಸುವ ವಾಹನಗಳು ಹೆದ್ದಾರಿ ಸರ್ವೀಸ್ ರಸ್ತೆ ಮೂಲಕ ಪೀಣ್ಯ ಪೊಲೀಸ್ ಠಾಣೆ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದ್ದು,ಆ ರಸ್ತೆಗಳಲ್ಲೂ ಕೂಡ ವಾಹನ ದಟ್ಟಣೆ ಹೆಚ್ಚಾಗಿದ್ದು ಗಂಟೆ ಗಟ್ಟಲೆ ಸವಾರರು ಸಮಯ ಕಳೆಯುವಂತಾಗಿದೆ.