Wednesday, April 30, 2025
32 C
Bengaluru
LIVE
ಮನೆರಾಜಕೀಯಆಂಧ್ರದಲ್ಲಿ NDAಗೆ ಭದ್ರಬುನಾದಿ ಹಾಕಿದ ಪವನ್‌ ಕಲ್ಯಾಣ್‌ – ಇವರು ‘ತೂಫಾನ್‌’ ಎಂದ ಮೋದಿ

ಆಂಧ್ರದಲ್ಲಿ NDAಗೆ ಭದ್ರಬುನಾದಿ ಹಾಕಿದ ಪವನ್‌ ಕಲ್ಯಾಣ್‌ – ಇವರು ‘ತೂಫಾನ್‌’ ಎಂದ ಮೋದಿ

‘ಪವನ್‌ ಕಲ್ಯಾಣ್‌ ಕೇವಲ ಪವನ್‌ ಅಷ್ಟೇ ಅಲ್ಲ.. ತೂಫಾನ್’‌.. ಇದು ಸ್ಟಾರ್‌ ನಟನೊಬ್ಬನ ಬಗ್ಗೆ ಪ್ರಧಾನಿ ಮೋದಿ ಆಡಿದ ಮಾತುಗಳು. ಪವನ್‌ ಕಲ್ಯಾಣ್‌ ತೆಲುಗು ಚಿತ್ರರಂಗದ ಖ್ಯಾತ ನಟ. ಈಗ ರಾಜಕೀಯದಲ್ಲೂ ಹೆಚ್ಚು ಸದ್ದು ಮಾಡ್ತಿದ್ದಾರೆ. NDA ಸಭೆಯಲ್ಲಿ ಮೋದಿ ‘ತೂಫಾನ್’‌ ಎಂದು ಬಣ್ಣಿಸಿದಾಗಿನಿಂದ ಇಡೀ ಭಾರತ ಈ ಸ್ಟಾರ್‌ ನಟನ ಕಡೆ ತಿರುಗಿ ನೋಡುತ್ತಿದೆ.

2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ರಾಜ್ಯ ಆಂಧ್ರಪ್ರದೇಶ. ಆಂಧ್ರದಲ್ಲಿ ಸಾರ್ವಭೌಮನಂತೆ ಮೆರೆಯುತ್ತಿದ್ದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿಯನ್ನು ಮಟ್ಟಹಾಕಬೇಕು ಎಂದು ಅನೇಕ ಪಕ್ಷಗಳು ಒಂದಾಗಿ ಅಖಾಡಕ್ಕಿಳಿದಿದ್ದವು. ಕೊನೆಗೆ ಯಶಸ್ವಿ ಕೂಡ ಆದವು. ರಾಜ್ಯದಲ್ಲಿ ಜಗನ್‌ ನೇತೃತ್ವದ YSRCP ಹೀನಾಯವಾಗಿ ಸೋತಿತು. ಇದರಲ್ಲಿ ಸ್ಟಾರ್‌ ನಟ ಪವನ್‌ ಕಲ್ಯಾಣ್‌ ಪಾತ್ರ ಪ್ರಮುಖವಾದದ್ದು. ಸಿನಿಮಾದಂತೆಯೇ ರಾಜಕೀಯ ರಂಗದಲ್ಲೂ ‘ಪವರ್‌ ಸ್ಟಾರ್‌’ ಧೂಳೆಬ್ಬಿಸಿಯೇ ಬಿಟ್ಟರು.

ಜನಸೇನಾ ಪಕ್ಷದ (JSP) ಪವನ್‌ ಕಲ್ಯಾಣ್‌ ಇಲ್ಲದಿದ್ದರೆ ಆಂಧ್ರಪ್ರದೇಶದ ಗೆಲುವು NDA ಬಣಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆಂಧ್ರದಲ್ಲಿ NDA ಅದ್ಭುತ ಪ್ರದರ್ಶನ ತೋರಿದೆ. ಈ ಬಾರಿ ಚುನಾವಣೆಯಲ್ಲಿ ಆಡಳಿತಾರೂಢ YSRCP ಸೋಲಿಗೆ ಕಾರಣವಾಯಿದೆ. ಈ ಅಭೂತಪೂರ್ವ ಗೆಲುವಿನಲ್ಲಿ ಸ್ಟಾರ್‌ ನಟನ ಶ್ರಮ ಎದ್ದು ಕಾಣುತ್ತಿದೆ. ಸಿನಿಮಾದಲ್ಲಷ್ಟೇ ಅಲ್ಲ ರಾಜಕೀಯದಲ್ಲೂ ನಾನೊಬ್ಬ ಸ್ಟಾರ್‌ ಎಂಬುದನ್ನು ಪವನ್‌ ಸಾಬೀತುಪಡಿಸಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರಚಾರ ನಡೆಸಿದರು. ಅವರು ಹೋದಲ್ಲೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಪವನ್‌ ಕಲ್ಯಾಣ್‌ಗೆ ಖ್ಯಾತ ನಟ ಹಾಗೂ ಸಹೋದರನೂ ಆದ ಚಿರಂಜೀವಿ, ಅಲ್ಲು ಅರ್ಜುನ್‌ ಸೇರಿದಂತೆ ದೊಡ್ಡ ತಾರಾಗಣವೇ ಬೆಂಬಲಕ್ಕೆ ನಿಂತಿತು. ಈ ಎಲ್ಲಾ ಪರಿಶ್ರಮದ ಫಲ ಆಂಧ್ರ ಚುನಾವಣಾ ಫಲಿತಾಂಶದಲ್ಲಿ ಗೋಚರಿಸಿತು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments