ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಏಳು ಆರೋಪಿಗಳಿಗೆ ಇಂದು ಕರ್ನಾಟಕ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ್ಗೂ ಸಹ ಜಾಮೀನು ದೊರೆತಿದೆ. ದರ್ಶನ್ ಈಗಾಗಲೇ ಮಧ್ಯಂತರ ಜಾಮೀನು ಪಡೆದು ಹೊರಗಿದ್ದಾರೆ. ಆದರೆ ಪವಿತ್ರಾ ಗೌಡ ಕಳೆದ ಆರು ತಿಂಗಳಿಂದಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ.
ನ್ಯಾಯಾಲಯವು ಏನೇನು ಷರತ್ತುಗಳನ್ನು ವಿಧಿಸಿದೆ ಎಂಬುದು ನಮಗೆ ಈಗ ತಿಳಿಯುವುದಿಲ್ಲ. ನ್ಯಾಯಾಲಯದ ಆದೇಶ ಬಂದ ನಂತರವೇ ಅದರ ಮಾಹಿತಿ ಲಭ್ಯ ಆಗಲಿದೆ ಎಂದ ವಕೀಲೆ ಶಿಲ್ಪಾ, ‘ಪವಿತ್ರಾ ಗೌಡ ಅವರು ಸೋಮವಾರದಂದು ಬಿಡುಗಡೆ ಆಗುವ ಸಾಧ್ಯತೆ ಇದೆ’ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಪವಿತ್ರಾ ಗೌಡ ಅವರ ತಾಯಿ, ‘ಮಗಳಿಗೆ ಜಾಮೀನು ಸಿಕ್ಕಿರುವುದು ಬಹಳ ಖುಷಿಯಾಗಿದೆ’ ಎಂದರು.


