ತಲಘಟ್ಟಪುರದ ವಜ್ರಮುನೇಶ್ವರ ದೇವಾಲಯ ಪವಿತ್ರಾಗೌಡ ಅವರ ತಾಯಿಯ ಮನೆ ದೇವರು ಆಗಿದೆ. ಹೀಗಾಗಿ ಜೈಲಿನಿಂದ ಪವಿತ್ರಾಗೌಡ ಬಿಡುಗಡೆ ಆದ ಮೇಲೆ ಅವರ ತಾಯಿ ಮೊದಲು ಜೈಲಿನ ಆವರಣದಲ್ಲಿರುವ ಮುನೇಶ್ವರನಿಗೆ ಪೂಜೆ ಸಲ್ಲಿಕೆ ಮಾಡಿದ್ದರು. ಇದಾದ ಮೇಲೆ ನೇರ ತಲಘಟ್ಟಪುರದ ವಜ್ರಮುನೇಶ್ವರ ದೇವಾಲಯ ಭೇಟಿ ಕೊಟ್ಟಿದ್ದರು. ಈ ವೇಳೆ ದೇವಾಲಯದ ಮುಂದೆ ಪವಿತ್ರಾಗೌಡ ತೀರ್ಥಸ್ನಾನ ಮಾಡಿದ್ದಾರೆ. ದೇವರಿಗೆ ಹೂವು, ಕಾಯಿ, ಆಗರಬತ್ತಿ, ನಿಂಬೆಹಣ್ಣು ಸಮೇತ ವಿಶೇಷ ಪೂಜೆ ಮಾಡಿದ್ದಾರೆ.
ವಜ್ರಮುನೇಶ್ವರ ದೇವಾಲಯದಲ್ಲಿ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ. ಈ ವೇಳೆ ಕೊನೆಯಲ್ಲಿ ದರ್ಶನ್ ಅವರ ಹೆಸರನ್ನು ಕೂಡ ಪೂಜಾರಿಗಳಿಗೆ ಹೇಳಲಾಗಿದೆ. ಹೀಗಾಗಿ ಪೂಜಾರಿ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿದ್ದಾರೆ.
ಸದ್ಯ ಪವಿತ್ರಾ ಗೌಡ ರಿಲೀಸ್ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಖುಷಿ ದುಪ್ಪಟ್ಟು ಆಗಿದೆ. 6 ತಿಂಗಳ ಬಳಿಕ ಜೈಲಿನಿಂದ ಪವಿತ್ರಾ ಗೌಡ ಬರುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಏರ್ಪಟ್ಟಿದೆ. ಇಂದು ಮನೆ ದೇವರ ಎಲ್ಲ ಕಾರ್ಯಗಳನ್ನು ಮುಗಿಸಿದ ಬಳಿಕ ತಮ್ಮ ನಿವಾಸದ ಕಡೆಗೆ ತೆರಳುತ್ತಾರೆ. ಜೈಲಿನಿಂದ ಬಿಡುಗಡೆ ಆದ ನಂತರ ಪವಿತ್ರಾ ಗೌಡ ತಮ್ಮ ತಾಯಿಯನ್ನು ತಬ್ಬಿಕೊಂಡು ಭಾವುಕರಾಗಿದ್ದರು.