Freedom TV

ಮತ್ತೆ ಫೀಲ್ಡ್‌ಗಿಳಿದ ನಟ ದರ್ಶನ್‌ ಪತ್ನಿ : ಪವಿತ್ರಗೌಡ ವಿರುದ್ಧ ವಿಜಯಲಕ್ಷ್ಮೀ ಕೆಂಡಾಮಂಡಲ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಪವಿತ್ರಾ ಗೌಡ ವಿರುದ್ಧ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಸಿಡಿದೆದ್ದಿದ್ದಾರೆ. ತನ್ನ ಗಂಡ‌ನ ಫೋಟೋಗಳನ್ನ ಶೇರ್ ಮಾಡಿದ್ದಕ್ಕೆ
ಕೆಂಡಾಮಂಡಲವಾಗಿದ್ದಾರೆ…ಹೌದು ನಟಿ ಪವಿತ್ರಾ ಗೌಡ ಅವರು ಡಿ ಬಾಸ್​ ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ರಿಲೇಶನ್ ಷಿಪ್ ಗೆ 10 ವರ್ಷ’ ಎಂದು ಬರೆಯುವ ಮೂಲಕ ಪೋಸ್ಟ್ ಹಾಕಿಕೊಂಡಿದ್ದಾರೆ. ಫೋಟೋದಲ್ಲಿ ಪವಿತ್ರಾ ಗೌಡ ಮತ್ತು ಆಕೆಯ ಮಗಳ ಜೊತೆಗಿರುವ ದರ್ಶನ್ ಕಾಣಿಸಿಕೊಂಡಿದ್ದಾರೆ.

ಅತ್ತ ಪವಿತ್ರಾ ಗೌಡ ಹಾಕಿರುವ ಪೋಸ್ಟ್ ಕಂಡು ದರ್ಶನ್​ ಪತ್ನಿ ವಿಜಯಲಕ್ಷ್ಮಿ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ಮತ್ತು ಆಕೆಯ ಪತಿ ಸಂಜಯ್ ಸಿಂಗ್ ಫೋಟೋ ಹಾಕಿಕೊಂಡು, ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ಚಿತ್ರಗಳಲ್ಲಿ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಅವರ ಮಗಳು ಕುಶಿ ಗೌಡ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.

ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆಯುವ ಮೂಲಕ ಸಂಜಯ್ ಸಿಂಗ್, ಖುಷಿ ಗೌಡ, ಶಾನ್ವಿ ಸಂಸೂರಿ ಹಾಗೂ ಪವಿತ್ರಾ ಗೌಡ ಅಕೌಂಟ್​ಗೆ ಟ್ಯಾಗ್​ ಮಾಡಿದ್ದಾರೆ.

ಒಟ್ಟಿನಲ್ಲಿ ಪವಿತ್ರಾ ಗೌಡ ಹಾಕಿಕೊಂಡಿರುವ ದರ್ಶನ್​ ಫೋಟೋಗೆ ಪತ್ನಿ ವಿಜಯಲಕ್ಷ್ಮೀ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಗೌರವಕ್ಕೆ ಧಕ್ಕೆ‌ತರುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆಲ್ಲ ನಟಿ ಪವಿತ್ರಾ ಗೌಡ ಏನು ಉತ್ತರ ಕೊಡಲಿದ್ದಾರೆ ಎಂದು ಕಾದುನೋಡಬೇಕಿದೆ.

Comments (0)

Your email address will not be published. Required fields are marked *

Back to top button