ಮಂಡ್ಯ : ಇದೇ ಮೊದಲ ಸಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದೇನೆ. ಆಹ್ವಾನ ಬಂದಾಕ್ಷಣ ಬಹಳ ಖುಷಿ ಆಗಿತ್ತು. ಚಿಕ್ಕವಯಸ್ಸಿಂದಲೂ ಸಮ್ಮೇಳನದ ಬಗ್ಗೆ ಕುತೂಹಲ ಇತ್ತು. ರಾಜ್ಯದ ವಿವಿಧಊರುಗಳಲ್ಲಿ ನಡೆಯುವ ಸಮ್ಮೇಳನಗಳ ವಿವರಗಳನ್ನು ಆಸಕ್ತಿಯಿಂದ ನೋಡುತ್ತಿದ್ದೆ. ಇಷ್ಟು ದೊಡ್ಡ ವೇದಿಕೆಯಲ್ಲಿ ನಾನೂ ಸಣ್ಣ ಭಾಗವಾಗಿರುವುದಕ್ಕೆ ಬಹಳ ಸಂತೋಷವಾಯಿತು. ಇವತ್ತು ನನ್ನನ್ನು ಕರೆಸಿದ್ದು ನಟನೆ ಹಾಗೂ ಸಾಹಿತ್ಯದ ಹಿನ್ನೆಲೆ ಇದ್ದದ್ದರಿಂದ. ಇದಕ್ಕೆ ಹೆಮ್ಮೆ ಇದೆ. ರಾಜೇಂದ್ರ ಸಿಂಗ್ ಬಾಬು, ಸತ್ಯಪ್ರಕಾಶ್ ಅವರಂಥ ಪ್ರತಿಭಾವಂತರ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಸಂತೋಷ ಇದೆ. ಕಿರುತೆರೆಯ ಸಾಧ್ಯತೆ ಮತ್ತು ಸವಾಲುಗಳು ಎಂಬ ವಿಷಯ ನನಗೆ ಸಿಕ್ಕಿತ್ತು. ಟಿವಿಯಿಂದ ಪಡ್ಕೊಂಡಿದ್ದೀನಿ. ಸವಾಲುಗಳು ಎಲ್ಲ ಕ್ಷೇತ್ರದಲ್ಲೂ ಇದ್ದೇ ಇರುತ್ತೆ. ಸವಾಲುಗಳನ್ನು ಧನಾತ್ಮಕವಾಗಿ ನೋಡಿದರೆ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಟಿವಿ ಅಂದರೆ ಬೈಬೇಡಿ ಅನ್ನುವ ಧ್ವನಿ ನನ್ನ ಮಾತಲ್ಲಿತ್ತು. ಒಂದು ಕುಟುಂಬವನ್ನು ಒಟ್ಟಿಗೆ ಕೂರಿಸಿ ಕನ್ನಡಭಾಷೆಯನ್ನು ಕೇಳುವ ಹಾಗೆ ಮಾಡೋದರಲ್ಲಿ ಟಿವಿ ಕೊಡುಗೆ ಸಣ್ಣದಲ್ಲ. ಹಳೇ ಸಿನಿಮಾ ತಲುಪೋದಕ್ಕೂ ಕಾರಣ ಟಿವಿ. ಈ ವಿಚಾರವಾಗಿ ಮಾತನಾಡಿದ್ದಕ್ಕೆ ಖುಷಿ ಆಯ್ತು.